Home_Page_Advt
Home_Page_Advt
Home_Page_Advt
Breaking News

ಕುಂತೂರು: ಕಾರು ಪಲ್ಟಿಯಾಗಿ ಕಮರಿಗೆ

kunthoor

ಪೆರಾಬೆ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರುಪದವು ಬಳಿಯ ಎರ್ಮಾಳ ಎಂಬಲ್ಲಿ ಫೆ.17ರಂದು ಸಂಜೆ ಒಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಪವಾಡ ಸದೃಶವಾಗಿ ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಚಾಲಕ ಉಪ್ಪಿನಂಗಡಿಯ ಚಂದ್ರ ಎಂಬವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಇವರು ತನ್ನ ಒಮ್ನಿ ಕಾರಲ್ಲಿ ಇತ್ತೀಚೆಗೆ ಮದುವೆಯಾದ ಕುಂತೂರು ಗ್ರಾಮದ ಇಡಾಳದ ವ್ಯಕ್ತಿಯೊಬ್ಬರ ಮನೆಗೆ ಮುದುವೆಯ ಮುಂದವರಿದ ಗಮ್ಮತ್ತಿನ ಪಾರ್ಟಿಗೆ ಜನಗಳನ್ನು ಬಿಟ್ಟು ಉಪ್ಪಿನಂಗಡಿ ಕಡೆಗೆ ವಾಪಾಸಾಗುತ್ತಿದ್ದಾಗ ಎರ್ಮಾಳದಲ್ಲಿ ನಿಯಂತ್ರಣ ತಪ್ಪಿ ಎಡಗಡೆಯಿಂದ ಬಲಗಡೆಗೆ ಬಂದು ಪಲ್ಟಿಯಾಗಿ ಕಮರಿನ ಚೆಂಡೆ ಮುಳ್ಳಿನ ಪೊದರಿಗೆ ಬಿದ್ದಿದೆ, ಕೂದಳೆಲೆಯುವ ಅಂತರದಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಸ್ಟೇಗೆ ತಾಗದೆ ಕೆಳೆಗೆ ಬಿದ್ದದೆ. ಒಂದು ವೇಳೆ ಸ್ಟೇಗೆ ಬಡಿಯುತ್ತಿದ್ದರೆ ಎಚ್.ಟಿ ಲೈನ್‌ನ ವಿದ್ಯುತ್ ಕಂಬ ಕಾರಿನ ಮೇಲೆ ಬೀಳುವ ಸಂಭವವಿತ್ತು. ಕಾರಿನಲ್ಲಿ ಚಾಲಕ ಮಾತ್ರ ಇದ್ದುದರಿಂದ ಅಪಾಯ ತಪ್ಪಿದೆ. ಸಾರ್ವಜನಿಕರು ಕಾರನ್ನು ಪೊದರಿನಿಂದ ಹರಸಾಹಸ ಪಟ್ಟು ಮೇಲಕ್ಕೆತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.