HomePage_Banner
HomePage_Banner
HomePage_Banner
HomePage_Banner

ಪೆರಿಯಡ್ಕದಲ್ಲಿ ಕೋಳಿ ಅಂಕ, ಜೂಜು ಅಡ್ಡೆಗೆ ದಾಳಿ-ಪ್ರತ್ಯೇಕ 2 ಪ್ರಕರಣದಲ್ಲಿ 16 ಮಂದಿ ಬಂಧನ

ಉಪ್ಪಿನಂಗಡಿ: ಪೆರಿಯಡ್ಕದ ಕೂವೆಚ್ಚಾರು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಮತ್ತು ಹೊಸಗದ್ದೆ ಗುಡ್ಡೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಪ್ರತ್ಯೇಕ ೨ ಪ್ರಕರಣಗಳಿಗೆ ಸಂಬಂಧಿಸಿದಂತೆ ೧೬ ಮಂದಿಯನ್ನು ಬಂಧಿಸಿದ್ದಾರೆ.

ಪೆರಿಯಡ್ಕದ ಕೂವೆಚ್ಚಾರು ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ಕೋಳಿ ಅಂಕದಲ್ಲಿ ನಿರತರಾಗಿದ್ದ ೯ ಮಂದಿಯನ್ನು ಬಂಧಿಸಿ ೫ ಕೋಳಿ ಮತ್ತು ಜೂಜಾಟಕ್ಕೆ ಬಳಸಿದ ೧೮೨೦ ರೂಪಾಯಿ ನಗದು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರದೀಪ್ ಹಿರೇಬಂಡಾಡಿ, ಮೋಹನ್ ಇಳಂತಿಲ, ಲಿಂಗಪ್ಪ ಗೌಡ ಬಜತ್ತೂರು, ಮಾಲಪ್ಪ ಪೆರಿಯಡ್ಕ, ಗೋಪಾಲ ಪೆರಿಯಡ್ಕ, ಸಂತೋಷ್ ಅಂಕದಬೈಲು, ಶ್ರೀಧರ ಅಂಕದ ಬೈಲು, ಮೋನಪ್ಪ ಬಿಳಿಯೂರು ಎಂಬವರನ್ನು ಬಂಧಿಸಲಾಗಿದೆ. ಪೆರಿಯಡ್ಕದ ಹೊಸಗದ್ದೆ ಸರ್ಕಾರಿ ಗುಡ್ಡದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾಗಿದ್ದ ೭ ಮಂದಿಯನ್ನು ಬಂಧಿಸಿ ಇಸ್ಪೀಟು ಎಲೆ ಸೇರಿದಂತೆ ಜೂಜಾಟಕ್ಕೆ ಬಳಸಿದ ೨೬೦೦ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಜೂಜಾಟ ಪ್ರಕರಣಕ್ಕೆ ಸಂಬಂಧಿಸಿ ಕೃಷ್ಣಪ್ಪ ನೆಕ್ಕಿಲಾಡಿ, ರಂಜಿತ್ ಹಿರೇಬಂಡಾಡಿ, ಚಂದ್ರಶೇಖರ    ಉಪ್ಪಿನಂಗಡಿ, ಸುನೀಲ್ ನೆಕ್ಕಿಲಾಡಿ, ಸತೀಶ್ ಗೌಡ ಬಜತ್ತೂರು, ಸುರೇಶ್ ಉಪ್ಪಿನಂಗಡಿ, ಧರ್ನಪ್ಪ ಪೂಜಾರಿ ಪೆರಿಯಡ್ಕ ಎಂಬವರನ್ನು ಬಂಧಿಸಲಾಗಿದೆ.

ಸಿಪಿಐ. ಅನಿಲ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ನಡೆದ ದಾಳಿ ಕಾರ‍್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶ್ರೀಧರ ರೈ,  ದೇವದಾಸ್, ಶೀನಪ್ಪ, ಮನೋಹರ, ನಂಜುಂಡ, ಶ್ರೀಧರ, ಕೃಷ್ಣ, ಹರೀಶ್, ನಾಗರಾಜ್ ಮತ್ತು ಜೀಪು ಚಾಲಕ ನಾರಾಯಣ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.