HomePage_Banner
HomePage_Banner
HomePage_Banner
HomePage_Banner

ಬಸ್ಸಿನಿಂದ ಎಸೆಯಲ್ಪಟ್ಟ ಮಹಿಳೆಗೆ ಗಾಯ – ಬಸ್ ಚಾಲಕ, ನಿರ್ವಾಹಕ ದೋಷಮುಕ್ತ

ಪುತ್ತೂರು: ಪ್ರಯಾಣಿಕರು ಬಸ್ ಹತ್ತುವ ಮುನ್ನವೇ ನಿರ್ಲಕ್ಷತನದಿಂದ ಬಸ್ ಚಲಾಯಿಸಿದ ಮತ್ತು ಚಲಾಯಿಸಲು ಸೂಚನೆ ಕೊಟ್ಟ ಬಸ್ ಚಾಲಕ ಮತ್ತು ನಿರ್ವಾಹಕನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

2011ರ ಎ.20ರಂದು ಉಪ್ಪಿನಂಗಡಿ ನಿವಾಸಿ ರವಿಪ್ರಕಾಶ್‌ರೊಂದಿಗೆ ಬಂದಿದ್ದ ಅವರ ಅಕ್ಕ ಪದ್ಮಲತಾರವರು ಬಲ್ಯಕ್ಕೆ ಹೋಗಲು ಗಾಂಧಿಪಾರ್ಕ್‌ನಲ್ಲಿ ಬಸ್(ಕೆ.ಎ.19 ಎಫ್ 2466) ಹತ್ತುವ ಮುನ್ನವೇ ಬಸ್‌ನ ನಿರ್ವಾಹಕ ಮೋನಪ್ಪ ವಿಸಿಲ್ ಹಾಕಿದ್ದು ಚಾಲಕ ಸಂಜಯ ಕಲ್ಲಪ್ಪರವರು ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿದ್ದರಿಂದ ಪದ್ಮಲತಾರವರು ಬಸ್‌ನಿಂದ ಹೊರಗೆ ಎಸೆಯಲ್ಪಟ್ಟು ಬಿದ್ದು ತಲೆಗೆ ಗಾಯವಾಗಿತ್ತು. ಈ ಕುರಿತು ಪುತ್ತೂರು ಸಂಚಾರ ಠಾಣೆಯಲ್ಲಿ ಚಾಲಕ, ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. ಆರೋಪಿಗಳ ಪರ ವಕೀಲರಾದ ರೈ-ರೈ ಎಸೋಸಿಯೇಟ್ಸ್‌ನ ಕುಂಬ್ರ ದುರ್ಗಾಪ್ರಸಾದ್ ರೈ, ಅರಂತನಡ್ಕ ಬಾಲಕೃಷ್ಣ ರೈ, ಕಕ್ವೆ ಕೃಷ್ಣಪ್ಪ ಗೌಡ, ಅಕ್ಷಯ್ ಪಿ.ಆರ್. ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.