Home_Page_Advt
Home_Page_Advt
Home_Page_Advt
Breaking News

ಹಾಸನ ಮೂಲದ ಯಾತ್ರಾರ್ಥಿಗಳಿದ್ದ ಬೊಲೆರೋ-ಪಿಕಪ್ ಮಧ್ಯೆ ಅಪಘಾತ : ಆರು ಮಂದಿಗೆ ಗಾಯ

bolero2 bolero1ಪುತ್ತೂರು: ಪಿಕ್‌ಅಪ್ ಹಾಗೂ ಯಾತ್ರಾರ್ಥಿಗಳು ಸಂಚರಿಸುತ್ತಿದ್ದ ಬೊಲೆರೋ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿ ಹಾಸನ ಮೂಲದ ಆರು ಮಂದಿ ಗಾಯಗೊಂಡ ಘಟನೆ ಡಿ.25ರಂದು  ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ ಎಂಬಲ್ಲಿ  ನಡೆದಿದೆ.

ಹಾಸನ ಜಿಲ್ಲೆಯ ವಿಜಯನಗರ ಬಡಾವಣೆ  ನಿವಾಸಿಗಾಳಾದ ಗುಂದೇ ಗೌಡರ ಪತ್ನಿ ವನಿತಾ(30.ವ),ಶ್ರೀನಿವಾಸ್‌ರವರ ಪತ್ನಿ ಶೃತಿ(23.ವ), ದಿ. ರಾಮಯ್ಯ ಗೌಡರ ಪತ್ನಿ ಕೆಂಪಮ್ಮ(55.ವ), ಮಾಯಪ್ಪ ಗೌಡರ ಪುತ್ರ ಲಿಂಗರಾಜ್(42.ವ), ಲಿಂಗರಾಜ್‌ರ ಪತ್ನಿ ಗೌರಿ(33.ವ) ಹಾಗು ಶ್ರೀನಿವಾಸ್(33.ವ)ರವರು ಗಾಯಗೊಂಡು ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಸನ ಮೂಲದ ಒಂದೇ ಕುಟುಂಬದವರು ಡಿ.೨೪ರಂದು ತಮ್ಮ ಊರಿನಿಂದ ಹೊರಟು ಸಾಯಂಕಾಲದ ವೇಳೆ ಧರ್ಮಸ್ಥಳಕ್ಕೆ ತಲುಪಿಸಿದ್ದರು. ಅಲ್ಲಿ ಪೂಜೆ ಮುಗಿಸಿದ ಕುಟುಂಬ ಡಿ.25ರಂದು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ ಎಂಬಲ್ಲಿ ಬೊಲೆರೋ ಮತ್ತು ಎದುರಿನಿಂದ ಬಂದ ಪಿಕಪ್ ಮಧ್ಯೆ ಅಪಘಾತ ಸಂಭವಿಸಿದೆ. ಪಿಕಪ್‌ಗೆ ಡಿಕ್ಕಿಯಾಗಿ ಬೊಲೆರೋ ಬಳಿಕ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ. ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಿಂದ ಗಾಯಗೊಂಡವರನ್ನು ಸ್ಥಳೀಯರು ಕೂಡಲೇ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಪೈಕಿ ಓರ್ವ ಮಹಿಳೆಗೆ ಕೈ, ಕಾಲು ಹಾಗೂ ಇನ್ನೋರ್ವ ಮಹಿಳೆಯ ಮುಖದ ಭಾಗಕ್ಕೆ  ಗಂಭೀರ ಗಾಯವಾಗಿದೆ. ಸಂಜೆಯ ವೇಳೆಗೆ ಸುಂಕದಕಟ್ಟೆಯಿಂದ ಮುಂದೆ ಸಿಪಿಸಿಆರ್‌ಐ ಬಳಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.