ಆಕ್ಟೀವಾ, ಸ್ವಿಫ್ಟ್ ಕಾರು ಡಿಕ್ಕಿ-ಪತ್ರಿಕಾ ವಿತರಕನಿಗೆ ಗಾಯ

Puttur_Advt_NewsUnder_1
Puttur_Advt_NewsUnder_1

activa-swiftಪುತ್ತೂರು: ಆಕ್ಟೀವಾ ಮತ್ತು ಸ್ವಿಫ್ಟ್ ಕಾರು ನಡುವೆ ಡಿಕ್ಕಿ ಸಂಭವಿಸಿದ ಘಟನೆ ದ.28ರಂದು ಮುಂಜಾನೆ ಬೊಳುವಾರು ಏಕಮುಖ ರಸ್ತೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಸವಾರ ಪತ್ರಿಕಾ ವಿತರಕ ಗಾಯಗೊಂಡಿದ್ದಾರೆ.

ಆಕ್ಟೀವಾ ಹೋಂಡಾ(ಕೆ.ಎ. 19ಇಎನ್ 9653)ದಲ್ಲಿ ಪತ್ರಿಕೆ ವಿತರಣೆ ಮಾಡಿಕೊಂಡು ಬೊಳುವಾರು ರಸ್ತೆಯಿಂದ ಮುಖ್ಯರಸ್ತೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಏಕಮುಖ ರಸ್ತೆಗೆ ಬಂದ ಮಾರುತಿ ಸ್ವಿಫ್ಟ್ ಕಾರು (ಕೆ.ಎ. 21 ಎಂ 7189) ಆಕ್ಟೀವಾ ಹೋಂಡಾಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ಪತ್ರಿಕೆ ವಿತರಕ , ಬನ್ನೂರು ಜೈನರಗುರಿಯಲ್ಲಿ ವಾಸ್ತವ್ಯ ಇರುವ ಮಂಡ್ಯ ಮೂಲದ ಆದರ್ಶ(18ವ)ರವರು ಗಾಯಗೊಂಡು ಇಲ್ಲಿನ ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಯಂದಾಗಿ ಗಾಯಾಳು ಆದರ್ಶರವರ ಕಾಲು ಮುರಿತಕ್ಕೊಳಗಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಆದರ್ಶ: ಆದರ್ಶರವರು ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದು ಬೆಳಗ್ಗಿನ ಜಾವ  ಪತ್ರಿಕೆ ಮತ್ತು ಹಾಲು ಮಾರಾಟ ಮಾಡಿ ಕಾಲೇಜಿಗೆ ಹೋಗುತ್ತಿದ್ದರು. ತನ್ನ ಓದಿನ  ಖರ್ಚಿಗಾಗಿ ಪಾರ್ಟ್ ಟೈಮ್ ಆಗಿ ಪತ್ರಿಕೆ ವಿತರಣೆ ಕೆಲಸ ಮಾಡಿಕೊಳ್ಳುತ್ತಿದ್ದರು. ಇದೀಗ ಅಪಘಾತಕೊಳಗಾಗಿದ್ದರಿಂದ ತುಂಬಾ ಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅವರ ಸ್ನೇಹಿತರು  ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.