Home_Page_Advt
Home_Page_Advt
Home_Page_Advt
Breaking News

ದೇವಸ್ಯ: ಬಸ್ಸು-ಲಾರಿ ಅಪಘಾತ: ಹಲವರಿಗೆ ಗಾಯ

devasya2 devasya1ಪುತ್ತೂರು: ಲಾರಿ ಹಾಗು ಬಸ್ಸಿನ ಮಧ್ಯೆ ಫೆ.1ರಂದು ದೇವಸ್ಯ ಸೇತುವೆಯ ಸಮೀಪ ಅಪಘಾತ ನಡೆದ ಬಗ್ಗೆ ವರದಿಯಾಗಿದೆ.

ಪುತ್ತೂರಿನಿಂದ ಪೆರ್ಲ ದಾರಿಯಾಗಿ ವಿಟ್ಲಕ್ಕೆ ಸಂಚರಿಸುವ ಭಗವತಿ(ಕೆಎ.20 ಎ.7849) ಬಸ್ಸು ಹಾಗು ವಿರುದ್ದ ದಿಕ್ಕಿನಿಂದ ಬಂದ ಲಾರಿ(ಕೆಎ.21 ಎ 2183) ಮಧ್ಯೆ ದೇವಸ್ಯ ಸೇತುವೆಯ ಸಮೀಪ ಈ ಅಪಘಾತ ಸಂಭವಿಸಿದೆ. ಘಟನೆಯಿಂದ ಗಾಯಗೊಂಡಿದ್ದ ಒಳಮೊಗರು ನಿವಾಸಿ ವಿಠಲ ರೈಯವರ ಪುತ್ರಿ ವಿಣಾ(14.ವ), ಬೆಟ್ಟಂಪಾಡಿ ದಿ. ಕಿಟ್ಟಣ್ಣರವರ ಪುತ್ರ ಶಶಿಧರ(40.ವ), ಇರ್ದೆ ನಿವಾಸಿ ದೇವಣ್ಣ ನಾಯ್ಕರವರ ಪತ್ನಿ ಶ್ಯಾಮಲ(35.ವ), ಅಜ್ಜಿಕಲ್ಲು ನಿವಾಸಿ ಗೋಪಾಲ ನಾಯ್ಕರವರ ಪುತ್ರಿ ದೀಪಶ್ರೀ (14ವ.), ಪೆರ್ಲ ನಿವಾಸಿ ರವಿಚಂದ್ರರವರ ಪತ್ನಿ ಸೌಮ್ಯ (20.ವ), ರಾಧಾಕೃಷ್ಣರವರ ಪುತ್ರಿ ಜಯಲಕ್ಷ್ಮಿ(15.ವ), ಬೆಟ್ಟಂಪಾಡಿ ನಿವಾಸಿ ಮೊಹಮ್ಮದ್ ಹನೀಫ್‌ರವರ ಪತ್ನಿ ಜೈನಾಬಿ(50.ವ), ಅಜ್ಜಿಕಲ್ಲು ನಿವಾಸಿ ಕೃಷ್ಣಪ್ರಸಾದ್‌ರವರ ಪುತ್ರಿ ಪೃಥ್ವಿ(22.ವ) ಹಾಗು ನಿರ್ಮಲರವರು ಗಾಯಗೊಂಡಿದ್ದು, ಅವರನ್ನು ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಗಾಯಾಳುಗಳು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಬಸ್ಸಿನಲ್ಲಿ ಸುಮಾರು 35ಮಂದಿ ಪ್ರಯಾಣಿಕರಿದ್ದು ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೃಥ್ವಿಯವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.