Home_Page_Advt
Home_Page_Advt
Home_Page_Advt
Breaking News

ಶರವೂರು ಕ್ಷೇತ್ರದಲ್ಲಿ ಭಕ್ತಾದಿಗಳ ಸಭೆ ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಶ್ರಮಿಸಲು ತೀರ್ಮಾಣ

 

sharavooruಆಲಂಕಾರು : ಆಲಂಕಾರು ,ಕುಂತೂರು ,ಪೆರಾಬೆ ,ಹಳೆನೇರಂಕಿ ಗ್ರಾಮಗಳ ಸೀಮೆ ದೇವಸ್ಥಾನವಾದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತಾಧಿಗಳ ಸಭೆಯು. ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ಕಮಲಾಕ್ಷ ರೈ ಪರಾರಿಗುತ್ತುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅನಾದಿ ಕಾಲದಿಂದಲೂ ಜಾತ್ರಾ ಸಮಯದಲ್ಲಿ ಅಲಂಕಾರು ಪೇಟೆಯಿಂದ ಕುಂತೂರುನವರೆಗೆ, ಕುಂತೂರುನಿಂದ ರಾಮಕುಂಜದ ಗಡಿವರೆಗೆ ನಡೆಯುತ್ತಿದ್ದ   ಶ್ರೀ ದೇವರ ಕಟ್ಟೆಪೂಜೆಯನ್ನು ಮುಂದುವರಿಸಬೇಕೆಂದು ಭಕ್ತಾದಿಗಳು ಆಗ್ರಹಿಸಿದರು.   ಅದಕ್ಕೆ ಉತ್ತರಿಸಿದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಮಲಾಕ್ಷ ರೈ ಯವರು, ಮುಂದಿನ ದಿನಗಳಲ್ಲಿ ಶ್ರೀ ದೇವಳದ ತಂತ್ರಿಗಳ ನಿರ್ದೇಶನದಂತೆ ಹಾಗೂ ಕಟ್ಟೆಪೂಜೆ ಮಾಡುವವರ ಸಭೆ ಕರೆದು  ಸಮಿತಿಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಜಾತ್ರೋತ್ಸವದ ಸಂದರ್ಭದಲ್ಲಿ  ವಿವಿಧ ಸಂಘ ಸಂಸ್ಥೆಗಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಲಾಖೆಗಳಿಂದ ಅನುಮತಿಯನ್ನು ದೇವಳದ ವತಿಯಿಂದಲೇ ಪಡೆಯಬೇಕೆಂದು ಸಭೆಯಲ್ಲಿ ವಿನಂತಿಸಿದರು. ಅದgಂತೆ ನಿರ್ಣಯಿಸಲಾಯಿತು. ಜಾತ್ರಾ ಸಂದರ್ಭದಲ್ಲಿ ಹಸಿರು ಹೊರೆಕಾಣಿಕೆ ಸಮರ್ಪಣೆಗೆ ಎಲ್ಲಾ ಶಾಲೆಗಳು ಹಾಗೂ ಸಂಘ ಸಂಸ್ಥೆಗಳ ಸಹಕಾರ ಪಡೆಯುವುದು ಹಾಗೂ ಜಾತ್ರೋತ್ಸವದ ಸಂದರ್ಭದಲ್ಲಿ ಭದ್ರತೆಯ ಬಗ್ಗೆ ದೇವಸ್ಥಾನದ ವತಿಯಿಂದ ಇಲಾಖೆಗೆ ಬರೆಯಲು, ಭಕ್ತಾದಿಗಳಿಗೆ ಬ್ರಹ್ಮರಥೋತ್ಸವಕ್ಕೆ  ಹಾಗೂ ಅನ್ನದಾನ ಸೇವೆಗೆ ಅವಕಾಶ ಮಾಡಿಕೊಡುವಂತೆ ಭಕ್ತಾದಿಗಳ ಸಭೆಯಲ್ಲಿ  ತೀರ್ಮಾನಿಸಲಾಯಿತು.

ಬಳಿಕ ಶ್ರೀ ದೇವಳದ ಉತ್ಸವ ಸಮಿತಿ ಹಾಗೂ ಸ್ವಯಂ ಸೇವಕರ ಸಮಿತಿಯನ್ನು ರಚಿಸಲಾಯಿತು. ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಉಪಾಧ್ಯಕ್ಷರುಗಳಾಗಿ ದಿನೇಶ ಗಾಣಂತಿ, ಕೃಷ್ಣಪ್ಪ ಗೌಡ ನಾಡ್ತಿಲ,ಮೇದಪ್ಪ ಕುಂಬಾರ,ಗುರುಪ್ರಸಾದ್ ಅಲೆಕ್ಕಿ, ಜನಾರ್ದನ ಗೌಡ ಕಯ್ಯಪೆ, ದಾಮೋದರ ಆಚಾರ್ಯ ಆಲಂಕಾರು, ರಾಧಾಕೃಷ್ಣ ನೆಕ್ಕಿಲಾಡಿ, ಆನಂದ ಶರವೂರು, ರಾಧಕೃಷ್ಣ ನಗ್ರಿ ಯವರನ್ನು ಆಯ್ಕೆ ಮಾಡಲಾಯಿತು.

ಸ್ವಯಂ ಸೇವಕರ ಸಮಿತಿಯ ಅಧ್ಯಕ್ಷರಾಗಿ ಚೆನ್ನಪ್ಪ ಗೌಡ ಶರವೂರು, ಉಪಾಧ್ಯಕ್ಷರುಗಳಾಗಿ ಶೀನಪ್ಪ ಕುಂಬಾರ, ಶಿವಾನಂದ ದೇವಾಡಿಗ, ನಾಗೇಶ ಕಣಿಯ,  ದಯಾನಂದ ಗೌಡ ಬಡ್ಡಮೆ, ಬಾಬು ಗೌಡ, ಶೈಲೆಂದ್ರ , ಯೋಗೀಶ್ ,ಸೀತಾರಾಮ ,ಚಿದಾನಂದ ,ಸುಂದರ ಪೂಜಾರಿ ,ಲೋಕೇಶ ಗೌಡ ಕಕ್ವೆ, ಲೋಕೇಶ ಗೌಡ ಕೇಪುಳು ರವರುಗಳನ್ನು ಆಯ್ಕೆ ಮಾಡಲಾಯಿತು.

ನಂತರ ಮಾಜಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಡಿಲ್ಲಾಯ ತೋಟಂತಿಲ ಮಾತನಾಡಿ, ಭಕ್ತರಾದ ನಾವೆಲ್ಲರೂ ಶ್ರೀ ದೇವಿಯ ಸೇವಕರಿದ್ದಂತೆ ನಮ್ಮಲ್ಲಿ ಮೇಲು ಕೀಳು ಎಂಬ ಬೇದಬಾವ ಬೇಡ ನಾವೆಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಮಾಜಿ ವ್ಯವಸ್ಥಾಪನಾ ಸಮಿತಿಯ ಇನ್ನೋರ್ವ ಅಧ್ಯಕ್ಷ ಪೂವಪ್ಪ ನಾಯ್ಕ  ಎಸ್. ಮಾತನಾಡಿ, ದೇವಳದಲ್ಲಿ ಹಿಂದು ಧಾರ್ಮಿಕತೆಗೆ ಸಂಬಂಧ ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಮಾಡಬೇಕು, ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಉಳಿಸುವಂತಹ ಸಾಂಸ್ಕೃತಿಕ ಕೆಲಸ ಕಾರ್ಯಗಳನ್ನು ಮಾಡಬೇಕೆಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಎಂ ಕಮಲಾಕ್ಷ ರೈ ಪರಾರಿಗುತ್ತು ಮಾತನಾಡಿ, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ  ಏಕ ಮನಸ್ಸಿನಿಂದ  ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದರಲ್ಲದೆ,  ದೇವಳದಲ್ಲಿ ನಡೆಯುವ ಮುಂದಿನ ಎಲ್ಲಾ ಕೆಲಸ ಕಾರ‍್ಯಕ್ಕೆ ಭಕ್ತರು ಸಹಕಾರ ನೀಡುವ ಮೂಲಕ ದೇವಳದ ಅಭಿವೃದ್ಧಿಯಲ್ಲಿ ಶ್ರಮಿಸುವಂತೆ ವಿನಂತಿಸಿದರು.

ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೀನಪ್ಪ ಗೌಡ ಶೇಡಿ, ಅನಂದ ಪೂಜಾರಿ ಅಗತ್ತಾಡಿ ,ಕರಿಯ ಗಾಣಂತಿ , ಮಿನಾಕ್ಷಿ ಹಳೆನೇರಂಕಿ ಉಪಸ್ಥಿತರಿದ್ದರು.ಕೃಷ್ಣಕುಮಾರ್ ಅಗತ್ತಾಡಿ ,ಕೊಣಾಲುಗುತ್ತು ವಿಠಲ ರೈ.ಕೆ ,ರಾಧಾಕೃಷ್ಣ ರೈ ಪರಾರಿ, ಗಣೇಶ ರೈ ಬೇಲ್ಪಾಡಿ ,ಶಶಿಕಾಂತ್ ರಾವ್, ಜಯಂತ ಪೂಜಾರಿ ನೆಕ್ಕಿಲಾಡಿ, ಶ್ರೀಧರ ಬಲ್ಯಾಯ, ತಿಮ್ಮಪ್ಪ ಗೌಡ , ತಿಮ್ಮಪ್ಪ ಪೂಜಾರಿ ಲೀಲಾವತಿ ಎಸ್. ಶೆಟ್ಟಿ ಸರ್ವೆದ ಬೈಲು ಹಾಗೂ ಇನ್ನಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ಸಲಹೆ ಸೂಚನೆ ನೀಡಿದರು.

ದೇವಳದ ಆರ್ಚಕರಾದ ರಾಘವೇಂದ್ರ ಪ್ರಸಾದ್ ಭಟ್ ಪ್ರಾರ್ಥಿಸಿ. ಉಮೇಶ ದೇವಾಡಿಗ ಕಾರ‍್ಯಕ್ರಮ ನಿರೂಪಿಸಿದರು ,ದೇವಳದ ಸಿಬ್ಬಂದಿ ಶ್ರೀಧರ ಆಚಾರ್ಯ ಧನ್ಯವಾದ ಸಮರ್ಪಿಸಿದರು. ದೇವಳದ ಸಿಬ್ಬಂದಿಗಳಾದ ಜಯಂತ ,ಮಂಜುನಾಥ ,ಹೊನ್ನಪ್ಪ, ಹೊನ್ನಮ್ಮ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.