HomePage_Banner
HomePage_Banner
HomePage_Banner
HomePage_Banner

ಪಾಕ್: 20 ರೋಗಿಗಳ ಹತ್ಯೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ದರ್ಗಾವೊಂದರಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, ಮೇಲ್ವಿಚಾರಕರೇ ೨೦ಕ್ಕೂ ಹೆಚ್ಚು ಮಾನಸಿಕ ರೋಗಿಗಳನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ದರ್ಗಾಗೆ ಭೇಟಿ ನೀಡಿದವರಿಗೆ ಮೊದಲು ಮೇಲ್ವಿಚಾರಕರು ಔಷಧಿಗಳನ್ನು ನೀಡಿದ್ದಾರೆ. ನಂತರ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆಂದು ವರದಿಯಾಗಿದೆ. ಘಟನೆಗೆ ಪ್ರಮುಖ ಕಾರಣಗಳ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ದರ್ಗಾದ ಮೇಲ್ವಿಚಾರಕರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.