HomePage_Banner
HomePage_Banner
HomePage_Banner
HomePage_Banner

ಮೊದಲ ಮಹಿಳಾ ಅಧ್ಯಕ್ಷೆ ಈಗ ಖೈದಿ

ದಕ್ಷಿಣ ಕೊರಿಯಾದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಪಾರ್ಕ್ ಜಿಯುನ್ ಹೈ, ಈಗ ಕೈದಿ ಸಂಖ್ಯೆ ೫೦೩. ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪಾರ್ಕ್, ನ್ಯಾಯಾಲಯದ ವಿಚಾರಣೆ ನಂತರ ಕಾರಾಗೃಹದಲ್ಲಿ ತಮ್ಮ ಮೊದಲ ರಾತ್ರಿಯನ್ನು ಏಕಾಂಗಿಯಾಗಿ ಕಳೆದರು. ಪಾರ್ಕ್ ಅವರ ಭಾವಚಿತ್ರವನ್ನು ತೆಗೆದುಕೊಂಡ ನಂತರ ಅವರಿಗೆ ಕೈದಿಗಳಿಗೆ ನೀಡುವಂತಹ ಪ್ರಸಾಧನ ಸಾಮಾಗ್ರಿ, ತಟ್ಟೆ ಹಾಗೂ ಹಾಸಿಗೆ ಇರುವ ಕಿಟ್ ನೀಡಲಾಯಿತು. ಜೈಲಿನ ಅಧಿಕಾರಿಗಳು ಅವರ ಕೊಠಡಿ ತೋರಿಸುತ್ತಿದ್ದಂತೆಯೇ ಪಾರ್ಕ್ ಅವರು ಬಿಕ್ಕಿಬಿಕ್ಕಿ ಅತ್ತರು ಎಂದು ಮೂಲಗಳು ತಿಳಿಸಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.