HomePage_Banner
HomePage_Banner
HomePage_Banner
HomePage_Banner

`ಪಿ.ಜಿ. ನಡೆಸುತ್ತಿರುವವರು 10 ದಿನ ಗಳೊಳಗೆ ಪೊಲೀಸರಿಗೆ ಮಾಹಿತಿ ನೀಡಿ

 

ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಸೂಚನೆ

ಸಮಸ್ಯೆ ಕಂಡು ಬಂದಲ್ಲಿ

ವ್ಯಾಟ್ಸಾಪ್ ಮಾಡಿ

ಅನಧಿಕೃತ ಪಿ.ಜಿ.ಗಳಿದ್ದಲ್ಲಿ, ಅಧಿಕೃತ ಪಿ.ಜಿಗಳಿಂದ ಸಾರ್ವಜನಿಕ ತೊಂದರೆ ಆಗುತ್ತಿದ್ದಲ್ಲಿ ಅಥವಾ ಪಿ.ಜಿ.ಗಳಲ್ಲಿ ವಾಸ್ತವ್ಯ ಇರುವವರಿಗೆ ತೊಂದರೆ ಆಗುತ್ತಿದ್ದರೆ, ಕಿರುಕುಳ ಉಂಟಾಗುತ್ತಿದ್ದರೆ ವ್ಯಾಟ್ಸಾಪ್ ನಂ. ೯೪೮೦೮೦೫೩೬೧ಗೆ ಮಾಹಿತಿ ರವಾನೆ ಮಾಡಿ. ಅನಧಿಕೃತ ಪಿ.ಜಿಗಳ ಭಾವಚಿತ್ರವನ್ನೂ ಕೂಡಾ ಕಳುಹಿಸಿಕೊಡಬಹುದು.ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿರಿಸಲಾಗುವುದು.

ಮಹೇಶ್ ಪ್ರಸಾದ್, ಇನ್‌ಸ್ಪೆಕ್ಟರ್

ಪುತ್ತೂರು ನಗರ ಪೊಲೀಸ್ ಠಾಣೆ

ಉದ್ದೇಶ

* ಸುರಕ್ಷತೆ

ಕಾಪಾಡುವುದು

  • ಅಪರಾಧ

ನಿಯಂತ್ರಿಸುವುದು

* ಅನಧಿಕೃತ

ಪಿಜಿಗಳಿಗೆ

ಕಡಿವಾಣ

*ಪಿ.ಜಿ ಪರವಾನಿಗೆಗೆ

ಪೊಲೀಸ್ ಎನ್‌ಒಸಿ ಅಗತ್ಯ

ಅನಧಿಕೃತ ಸುರಕ್ಷತವಲ್ಲದ ಕಟ್ಟಡಗಳಲ್ಲೂ ಪಿ.ಜಿಗಳು

ಅನಧಿಕೃತ ಸುರಕ್ಷತವಲ್ಲದ ಕಟ್ಟಡಗಳಲ್ಲೂ ಪಿ.ಜಿಗಳು ಪುತ್ತೂರಿನ ಕಾಲೇಜು ಪರಿಸರದಲ್ಲಿದೆ.ಮುಂದಿನ ದಿನಗಳಲ್ಲಿ ಪಿ.ಜಿಗಳಿಗೆ ನಗರಸಭೆ ಪರವಾನಿಗೆ ನೀಡುವ ಮುನ್ನ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ)ವನ್ನು ಪಿ.ಜಿ ನಡೆಸುವ ಮಾಲಕರು ಪಡೆಯಬೇಕು.ಈ ಕುರಿತು ನಗರಸಭೆಗೆ ಪತ್ರ ಬರೆಯಲಾಗುವುದು ಎಂದು ಪುತ್ತೂರು ನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

ಪುತ್ತೂರು: ಇತ್ತೀಚಿಗಿನ ದಿನಗಳಲ್ಲಿ ಕಾಲೇಜು ಪರಿಸರದಲ್ಲೇ ವಿದ್ಯಾರ್ಥಿಗಳ ಘರ್ಷಣೆಗಳು ನಡೆಯುತ್ತಿದ್ದು ಇದಕ್ಕೆ ಪಿ.ಜಿ.ಗಳೇ ಹೊಣೆ ಎನ್ನುವ ತೀರ್ಮಾನಕ್ಕೆ ಬಂದಿರುವ ಪೊಲೀಸರು ಪಿ.ಜಿ.ಗಳ ಮಾಹಿತಿ ಸಂಗ್ರಹ ಕಾರ್ಯದಲ್ಲಿ ನಿರತರಾಗಿದ್ದಾರೆ.ಪಿ.ಜಿಗಳನ್ನು ನಡೆಸುತ್ತಿರುವ ಮಾಲಕರು ತಮ್ಮ ಪಿ.ಜಿ.ಗಳ ವಿಳಾಸವನ್ನು ೧೦ ದಿನಗಳೊಳಗೆ ಪೊಲೀಸ್ ಠಾಣೆಗೆ ನೀಡುವಂತೆ ಪುತ್ತೂರು ನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸೂಚನೆ ನೀಡಿದ್ದಾರೆ.

ಸೆಕ್ಯೂರಿಟಿ  ವ್ಯವಸ್ಥೆಗಳಿಲ್ಲ:

ಪುತ್ತೂರಿನಲ್ಲಿರುವ ಹೆಚ್ಚಿನ ಪಿ.ಜಿಗಳಲ್ಲಿ ಸೂಕ್ತ ಭದ್ರತೆಯ ವ್ಯವಸ್ಥೆಯಿಲ್ಲ.ಅವುಗಳನ್ನು ಹದ್ದು ಬಸ್ತಿನಲ್ಲಿಡಲು ಪುತ್ತೂರಿನ ಕಾಲೇಜು ಪರಿಸರದಲ್ಲಿರುವ ಪಿ.ಜಿಗಳ ಸಂಖ್ಯೆ ಎಷ್ಟಿದೆ? ಎಷ್ಟು ವಿದ್ಯಾರ್ಥಿಗಳಿದ್ದಾರೆ? ಅಥವಾ ಕೆಲಸಕ್ಕೆ ತೆರಳುವ ಬ್ಯಾಚುಲರ್‍ಸ್‌ಗಳಿದ್ದಾರೋ? ಇರುವ ಪಿ.ಜಿಗಳೂ ನಗರಸಭೆಯಿಂದ ಪರವಾನಿಗೆ ಪಡೆದಿದೆಯೊ ಎನ್ನುವುದನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಲು ಸಿದ್ಧರಾಗಿದ್ದಾರೆ.

ಯಾರಲ್ಲೂ ಮಾಹಿತಿ ಇಲ್ಲ: ಪಿ.ಜಿಗಳ ಕುರಿತು ಸರಿಯಾದ ಮಾಹಿತಿ ಯಾರಲ್ಲೂ, ಯಾವ ಇಲಾಖೆಯಲ್ಲೂ ಇಲ್ಲ.ಆದರೆ ಕೆಲವೊಂದು ಪಿ.ಜಿಗಳಲ್ಲಿ ವಾಸ್ತವ್ಯ ಇರುವವರಿಂದ ರಾತ್ರಿ ಹೊತ್ತು ಅತಿರೇಕದ ಶಬ್ದಗಳಿಂದಾಗಿ ಸ್ಥಳೀಯರಿಗೆ ಕಿರಿಕಿರಿ ಉಂಟಾಗಿ ಪೊಲೀಸರಿಗೆ ದೂರು ನೀಡುವ ಹಂತಕ್ಕೂ ತಲುಪಿದ ಸನ್ನಿವೇಶ ಬಂದಾಗಲೇ ಅಲ್ಲೊಂದು ಪಿ.ಜಿ ಇದೆ ಎನ್ನುವುದ ತಿಳಿಯುತ್ತದೆ. ನಗರಸಭೆಯಿಂದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಪಿ.ಜಿ ನಡೆಸಿಕೊಂಡು ಹೋಗುವವರು ಹಲವರಿದ್ದಾರೆ.ಅಲ್ಲಿ ತಂಗುವವರಿಗೆ ಸೂಕ್ತ ಭದ್ರತೆ, ಸರಿಯಾದ ವಸತಿ ವ್ಯವಸ್ಥೆ, ಆಹಾರ ವಿಚಾರ ಇವುಗಳ ಸಮಸ್ಯೆ ಇದೆ.ಎಷ್ಟೋ ಕಡೆ ಸಣ್ಣಪುಟ್ಟ ಕಟ್ಟಡವನ್ನೂ ಪಿ.ಜಿಯನ್ನಾಗಿ ಮಾಡಿ ಅಲ್ಲೊಂದಿಷ್ಟು ವಿದ್ಯಾರ್ಥಿಗಳನ್ನು ತುಂಬಿಸುವ ಕಾರ್ಯವೂ ನಡೆದಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಾಲೇಜು ಮುಗಿದ ಬಳಿಕವೂ ತಮ್ಮ ಪಿ.ಜಿಯನ್ನು ಬಿಡದೆ ಇಲ್ಲಿಂದಲೇ ಮುಂದಿನ ಶಿಕ್ಷಣಕ್ಕೆ ಮಂಗಳೂರಿಗೆ ಹೋಗಿ ಬರುವವರೂ ಇದ್ದಾರೆ ಎಂದೂ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.ಪಿ.ಜಿಗಳ ಸೂಕ್ತ ಭದ್ರತೆ ವಿಚಾರದಲ್ಲಿ ಪೊಲೀಸರು ವಿಶೇಷ ಗಮನಹರಿಸಿ ಕೆಲವೊಂದು ಅಂಶಗಳನ್ನು ಪಿ.ಜಿ ಮಾಲಕರು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಿದ್ದಾರೆ.ಪಿ.ಜಿಗಳಲ್ಲಿ ಸಿ.ಸಿ.ಕ್ಯಾಮರಾ, ತಿಂಗಳಿಗೊಮ್ಮೆ ಮಾಲಕರ ಸಭೆ, ಸೆಕ್ಯೂರಿಟಿ ವ್ಯವಸ್ಥೆ, ಪಿ.ಜಿಗಳಿಗೆ ಭೇಟಿ ಕೊಟ್ಟು ಹೋಗುವವರ ಮಾಹಿತಿ ಇವೆಲ್ಲವನ್ನು ಮಾಲಕರು ದಾಖಲೀಕರಿಸಿರಬೇಕು.ಮಹಿಳೆಯರ ಪಿ.ಜಿ. ವಿಷಯದಲ್ಲಿ ಈ ಸೂಚನೆ ಹೆಚ್ಚು ಪ್ರಸ್ತುತವಾಗುತ್ತಿದೆ.ಆಯಾ ಪ್ರದೇಶದಲ್ಲಿರುವ ಪಿ.ಜಿ. ಮಾಲಕರನ್ನು ಸಭೆ ಸೇರಿಸಿ ಅವರಿಗೆ ಈ ಕುರಿತು ವಿವರಿಸಬೇಕು.ಅಲ್ಲದೇ ಪಿ.ಜಿ.ಗಳಲ್ಲಿ ಇರುವ ಮಹಿಳೆಯರ ಸಂಖ್ಯೆ, ಅವರ ಅರ್ಜಿ ಫಾರಂಗಳು,ಎಷ್ಟು ಮಹಿಳೆಯರಿದ್ದಾರೆ ಹಾಗೂ ಅವರ ವಿಳಾಸ ಪಿ.ಜಿ. ಮಾಲೀಕರಲ್ಲಿ ಕಡ್ಡಾಯವಾಗಿರಬೇಕು.ಜತೆಗೆ ಪಿ.ಜಿ. ಮಾಲೀಕರ ಹಾಗೂ ವಾರ್ಡನ್, ವಾಚ್‌ಮೆನ್‌ನ ವಿಳಾಸ, ಅವರ ಫೋನ್ ನಂಬರ್ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರಬೇಕು.ಈ ಮಾಹಿತಿ ನೀಡುವುದರೊಂದಿಗೆ ಪ್ರತಿ ಪಿ.ಜಿ.ಯಲ್ಲಿಯೂ ಕಟ್ಟಡದ ಎದುರು ಮತ್ತು ಹಿಂದೆ ಒಂದು ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು ಎಂಬುದು ಇಲಾಖಾ ನಿರ್ದೇಶನ.

ಉದ್ದೇಶ:  ಪಿ.ಜಿಗಳಲ್ಲಿರುವ ಯುವತಿಯರಾಗಲಿ, ಯುವಕರಾಗಲಿ ಅವರ ಸುರಕ್ಷತೆ ಕಾಪಾಡುವುದು, ಜತೆಗೆ ಅಲ್ಲಿ ನಡೆಯುವ ಕಳ್ಳತನ ಹಾಗೂ ಇತರ ಅಪರಾಧಗಳನ್ನು ತಡೆಯುವುದು ಪೊಲೀಸರ ಈ ನಿರ್ಧಾರದ ಉದ್ದೇಶ.ಮಹಿಳೆಯರ ನಡುವೆಯೇ ಇದ್ದು ಅಲ್ಲಿಯೇ ಅನಾಹುತಗಳನ್ನು ಸೃಷ್ಟಿಸುವ ಮಹಿಳಾ ಅಪರಾಧಿಗಳೂ ಇದ್ದಾರೆ.ಪಿ.ಜಿ.ಗಳು ಸಾರ್ವಜನಿಕ ಸ್ಥಳವಲ್ಲ.ಅಲ್ಲಿ ಯಾವಾಗ ಬೇಕೆಂದರೆ ಆಗ ಯಾರು ಬೇಕಾದರೂ ಬಂದು ಹೋಗುವಂತೆಯೂ ಇಲ್ಲ.ಎಲ್ಲರ ದಾಖಲೆಯನ್ನು ಪಿ.ಜಿ ಮಾಲಕರು ಮಾಡಿಕೊಳ್ಳಬೇಕು.ಇದು ಮುಂದೆ ತನಿಖೆಗೆ ಸಹಾಯಕವಾಗುತ್ತದೆ. ಅಲ್ಲದೇ ಪಿ.ಜಿ.ಗೆ ಹಣ ತುಂಬಿದವರಿಗೆ ರಶೀದಿ ನೀಡುವ ಪದ್ಧತಿ ಕಡ್ಡಾಯವಾಗಿ ಜಾರಿಯಾಗಿ, ಪಿ.ಜಿ.ಗಳ ನೋಂದಣಿಯೂ ಸರಿಯಾಗುತ್ತದೆ ಎಂಬುದು ಉದ್ದೇಶ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.