HomePage_Banner
HomePage_Banner
HomePage_Banner
HomePage_Banner

ನ.24: ಉಡುಪಿಯಲ್ಲಿ ಧರ್ಮ ಸಂಸದ್, ಹಿಂದೂ ಸಮಾಜೋತ್ಸವ – ನ.16, 17: ಪುತ್ತೂರಿನಲ್ಲಿ ವರ್ತಕರ, ವಕೀಲರ, ವೈದ್ಯರ, ಮಠ ಮಂದಿರಗಳ ಪೂರ್ವಭಾವಿ ಸಭೆ

ಪುತ್ತೂರು: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವ ತೀರ್ಥ ಪಾದಂಗಳವರ ಪರ್ಯಾಯದ ಕಾಲದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಉಡುಪಿ ಕಲ್ಸಂಕ ಸಮೀಪದ ರಾಯಲ್ ಗಾರ್ಡನ್ ಮತ್ತು ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ನ.24 ರಂದು ಧರ್ಮ ಸಂಸದ್ ಮತ್ತು ನ.26 ರಂದು ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ವಿಶ್ವಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷರೂ ಧರ್ಮ ಸಂಸದ್‌ನ ಪ್ರಮುಖರು ಆಗಿರುವ ಡಾ. ಕೃಷ್ಣಪ್ರಸನ್ನರವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಜಾತಿಭೇದಗಳ ಕಾರಣದಿಂದ ನಷ್ಟವಾಗುತ್ತಿರುವ ಸಮರಸತೆ ಅಸ್ಪಶೃತೆಯ ಆಚರಣೆಯ ಕಳಂಕದಿಂದ ಕದಡುತ್ತಿರುವ ಸಾಮರಸ್ಯ ಮತಾಂತರದ ಪಿಡುಗಿನಿಂದ ಕ್ಷೀಣಿಸುತ್ತಿರುವ ಹಿಂದು ಜನಸಂಖ್ಯೆ, ಗೋಹತ್ಯೆ ಪಾಪದಿಂದ ಉದ್ಭವವಾಗುವ ಸಾಮಾಜಿಕ ಕ್ಷೋಭೆ, ಸಾಂಸ್ಕೃತಿಕ ಆಕ್ರಮಣದಿಂದ ಉಂಟಾದ ಸಂಸ್ಕೃತಿ ವಿರುದ್ಧವಾದ ವಿಕೃತ ಬದುಕಿನ ರೀತಿ ಇವೆಲ್ಲವೂ ಹಿಂದೂ ಸಮಾಜವನ್ನು ಭಾದಿಸುತ್ತಿದೆ. ಈ ಕಾಲಘಟ್ಟದಲ್ಲಿ ನಷ್ಟವಾಗುತ್ತಿರುವ ಸಂಸ್ಕಾರ ಕ್ಷಮತೆಗಳನ್ನು ಹಿಂದೂ ಸಮಾಜದ ಧರ್ಮಾಚಾರ್ಯರ ಮತ್ತು ಪೀಠಾಧಿಪತಿಗಳ ಪ್ರಬುದ್ಧ ನಿರ್ದೇಶನವನ್ನು ಹಿಂದೂ ಸಮಾಜ ನಿರೀಕ್ಷಿಸುತ್ತಿದೆ. ಈ ನಿಟ್ಟಿನಲ್ಲಿ ನಡೆಯುವ ಧರ್ಮ ಸಂಸದ್ ಅಧಿವೇಶನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘ ಚಾಲಕ ಮಾನನೀಯ ಡಾ. ಮೋಹನ ಭಾಗವತ್, ವಿಶ್ವ ಹಿಂದೂ ಪರಿಷತ್‌ನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ಬಾಯ್ ತೊಗಾಡಿಯಾ, ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್ ಸೇರಿದಂಥೆ ಎಲ್ಲಾ ಪ್ರಮುಖರು ಭಾಗವಹಿಸಲಿದ್ದು, ಹಿಂದೂ ವೈಭವ್ ಎಂಬ ಅಧಿವೇಶನದಲ್ಲಿ ಸುಮಾರು 2,500 ಮಂದಿ ಸಾಧು ಸಂತರು ಒಂದೆಡೆ ಸೇರಿ ಧರ್ಮಸಂದೇಶ ಹೊರಬರಲಿದೆ. ಈ ಸಂದೇಶ ನ.25 ರ ತನಕ ನಡೆಯಲಿದೆ ಎಂದ ಅವರು ನ.26 ರಂದು ಸಂಜೆ ಆಕರ್ಷಕ ಶೋಭಾಯಾತ್ರೆಯೊಂದಿಗೆ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ಹೇಳಿದ ಅವರು ಇದು ಉಡುಪಿಯಲ್ಲಿ ನಡೆಯುವ 2ನೇ ಅತಿ ದೊಡ್ಡ ಸಮಾವೇಶವಾಗಿದೆ ಎಂದರು.

  • ನ.16, 17ಕ್ಕೆ ಪೂರ್ವ ಭಾವಿ ಸಭೆ

ಧರ್ಮ ಸಂಸದ್ ಕಾರ್ಯಕ್ರಮದ ಸ್ವಾಗತ ಸಮಿತಿಯಲ್ಲಿ ಪುತ್ತೂರಿನ ಎಸ್.ಆರ್ ರಂಗಮೂರ್ತಿ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಕ್ಯಾಂಪ್ಕೋ ನಿರ್ದೇಶಕ ಕೊಂಕೋಡಿ ಪದ್ಮನಾಭ ಭಟ್, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸೀತಾರಾಮ ರೈ ಸವಣೂರು, ವಿಶ್ವಹಿಂದೂ ಪರಿಷದ್ ಜಿಲ್ಲಾ ಗೌರವಾಧ್ಯಕ್ಷ ಯು.ಪೂವಪ್ಪರವರು ಸಕ್ರೀಯರಾಗಿದ್ದು ಪುತ್ತೂರಿನ ವೈದ್ಯರ, ನ್ಯಾಯವಾದಿಗಳ ಮತ್ತು ವರ್ತಕರ ಸಭೆಯನ್ನು ನ.16 ರಂದು ಇಲ್ಲಿನ ವಿಜಯ ಸುಫಾರಿಯ ಸಭಾಂಗಣದಲ್ಲಿ ಕರೆಯಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ವಿವಿಧ ಮಾಹಿತಿ ನೀಡಲಿದ್ದಾರೆ. ನ.17 ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ತಾಲೂಕಿನ ಎಲ್ಲಾ ಮಠ, ಮಂದಿರಗಳ ಮುಖ್ಯಸ್ತರ ಸಭೆಯನ್ನು ಕರೆಯಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೀತಾರಾಮರವರು ಮಾಹಿತಿ ನೀಡಲಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‌ನ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ ತಿಳಿಸಿದ್ದಾರೆ.

  • ನ.18, 19ಕ್ಕೆ ಪ್ರಚಾರ

ಧರ್ಮ ಸಂಸದ್ ವಾಹನ ಪ್ರಚಾರ ಕಾರ್ಯ ನ.18 ಮತ್ತು 19 ರಂದು ನಡೆಯಲಿದ್ದು, ಪ್ರತಿ ಗ್ರಾಮ ಗ್ರಾಮಕ್ಕೂ ತೆರಳಿ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಸೇರಿದಂತೆ ಪುತ್ತೂರು ಜಿಲ್ಲೆಯಿಂದ ಸುಮಾರು 25 ಸಾವಿರ ಮಂದಿ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಭಾಗವಹಿಲಿಸದ್ದಾರೆ ಎಂದು ಡಾ. ಕೃಷ್ಣಪ್ರಸನ್ನ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಧರ್ಮ ಪ್ರಸಾರ ಪ್ರಮುಖ್ ಸಂಕಪ್ಪ ಗೌಡ, ವಿ.ಹಿಂ. ಪುತ್ತೂರು ಜಿಲ್ಲಾ ಪೂರ್ಣಕಾಲಿಕ ಕಾರ್ಯಕರ್ತ ಸಂಕಪ್ಪ ಭಂಡಾರಿ, ಜಿಲ್ಲಾಧ್ಯಕ್ಷ ಬಿ.ಎಸ್ ಸತೀಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.