HomePage_Banner
HomePage_Banner
HomePage_Banner
HomePage_Banner

ಐವರ್ನಾಡು : ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ – ಸಾಮಾಜಿಕ ಜಾಲತಾಣದ ಪ್ರೇಮ ವೈಫಲ್ಯ

ಸವಣೂರು: ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಚೀಮುಳ್ಳು ನಿವಾಸಿ, ಕೋಡಿಯಾಲ್ ಬೈಲ್ ಸರಕಾರಿ ಪದವಿ ಕಾಲೇಜಿನ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿ ದೀಕ್ಷಿತ್ ಸಿ.ಆರ್. ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚೀಮುಳ್ಳು ದಿ| ರತ್ನಾಕರ ಎಂಬವರ ಪುತ್ರ ದೀಕ್ಷಿತ್ (21 ವ.) ಮನೆ ಸಮೀಪವಿದ್ದ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿಂದೆಯೂ ಎರಡು ಮೂರು ಬಾರಿ ಆತ್ಮಹತ್ಯೆಗೈಯಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆತ್ ನೋಟ್: ನೇಣು ಬಿಗಿದುಕೊಂಡ ಮರದ ಬಳಿಯಲ್ಲಿ ಮೊಬೈಲ್ ಜೊತೆಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ನಾನು ಬಡವನಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿಸಿದ ಹುಡುಗಿಯನ್ನು ವಿವಾಹವಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿತ್ತು.

ಬಡ ಕುಟುಂಬ: ದಿ| ರತ್ನಾಕರ ಲಲಿತಾ ದಂಪತಿಗೆ ದೀಕ್ಷಿತ್ ಓರ್ವನೇ ಪುತ್ರನಿದ್ದು ಇದೀಗ ದೀಕ್ಷಿತ್ ನಿಧನದಿಂದಾಗಿ ಲಲಿತಾರಿಗೆ ದಿಕ್ಕುತೋಚದಂತಾಗಿದೆ. ತಾಯಿ ಲಲಿತಾ ಕಷ್ಟಪಟ್ಟು ಬೀಡಿ ಕಟ್ಟಿ, ಅದರ ಆದಾಯದಿಂದಲೇ ಮನೆ ಹಾಗೂ ಮಗನ ಶಿಕ್ಷಣಕ್ಕೆ ಆಸರೆಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.