HomePage_Banner
HomePage_Banner
HomePage_Banner
HomePage_Banner

ಸಂಟ್ಯಾರು ಉ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ

ಗ್ರಾಮಸಭೆಯಲ್ಲಿ ಕೇಳಿ ಬಂದ ಪ್ರಶ್ನೆಗಳು

 • ಕುಂಜೂರುಪಂಜ ಶಾಲೆ
  ಆವರಣ ಗೋಡೆ, ಕಸದ ತೊಟ್ಟಿ ಇಲ್ಲ
  ಪ್ರತಿಸ್ಪಂದನೆ
  ಆವರಣ ಗೋಡೆಗೆ ಈಗಾಗಲೇ ಅನುದಾನಕ್ಕೆ ಅರ್ಜಿ ಹಾಕಿದ್ದೇವೆ. ಕಸದ ತೊಟ್ಟಿಗಾಗಿ ಡಂಪಿಂಗ್‌ಯಾರ್ಡ್ ವ್ಯವಸ್ಥೆ ಮಾಡಲಾಗುವುದು.
 • ಕುರಿಯ ಶಾಲೆ
  ಸಾರ್ವಜನಿಕರು ಧೂಮಪಾನ, ಮದ್ಯಪಾನ ಮಾಡಿ ಬಾಟಲ್, ಕಸಗಳನ್ನು ಶಾಲಾ ಆವರಣದಲ್ಲಿ ಬಿಸಾಡುವುದು
  ಶಾಲೆಯ ಹಿಂದೆ ಕೋಳಿ ಫಾರಂ ಇರುವುದರಿಂದ ಅದರ ದೂರ್ವಾಸನೆಯಿಂದ ಪಾಠ ಕೇಳಲು ತೊಂದರೆ
  ಪ್ರತಿಸ್ಪಂದನೆ
  ಪೊಲೀಸ್ ಇಲಾಖೆಗೆ ತಿಳಿಯಪಡಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಬಕಾರಿ ಇಲಾಖೆಗೆ ಮಾಹಿತಿಯನ್ನು ನೀಡಿದ್ದೇವು.
  ಕೋಳಿ ಫಾರಂ ಮಾಡಲು ಆರೋಗ್ಯ ಇಲಾಖೆ ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು. ಅದು ಒಪ್ಪಿಗೆ ಕೊಟ್ಟ ಕಾರಣವೇ ನಾವು ಲೈಸೆನ್ಸ್ ನೀಡಿದ್ದು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 • ಸಂಟ್ಯಾರು ಶಾಲೆ
  ವಾಹನಗಳ ರಭಸದಿಂದ ರಸ್ತೆ ದಾಟಲು ಹೆದರಿಕೆ
  ಕಂಪ್ಯೂಟರ್ ಹಾಳಾಗಿದೆ
  ಶಾಲೆಗೆ ಸುಣ್ಣ ಬಣ್ಣದ ಭಾಗ್ಯ ಕೊಡಿ
  ನಮಗೆ ಪ್ರೋಜೆಕ್ಟರ್ ಬೇಕು
  ಕಿಟಕಿ, ಬಾಗಿಲು ಮುರಿದಿದೆ
  ಪ್ರತಿಸ್ಪಂದನೆ
  ಶಾಲಾ ಆವರಣದಲ್ಲಿರುವ ಅಕೇಶಿಯಾ ಮರಗಳು ಆರೋಗ್ಯಕ್ಕೆ ಹಾನಿಕಾರಕ ಅದನ್ನು ಕಡಿಯಬೇಕು.
  ರಸ್ತೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗುವುದು. ಅನುದಾನದ ಕೊರತೆಯಿದೆ. ಇಲಾಖೆಯೇ ವ್ಯವಸ್ಥೆ ಮಾಡಲಿ. ಅಕೇಶಿಯಾ ಮರ ಕಡಿಯಲು ಹೋದರೆ ಮಾಹಿತಿ ಹಕ್ಕಿಗೆ ನಮ್ಮವರೇ ದೂರು ಸಲ್ಲಿಸುತ್ತಾರೆ. ನಿರ್ಣಯ ಬರೆದು ಜಿಲ್ಲಾ ಪಂಚಾಯತ್‌ಗೆ ಸಲ್ಲಿಸುತ್ತೇವೆ.

ಶಾಲೆಗಳು ಭಯಮುಕ್ತ ಮಗುಸ್ನೇಹಿಯಾಗಿರಲಿ: ಮಮತಾ ರೈ

ಪುತ್ತೂರು: ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಲ್ಲ, ಇಂದಿನ ಪ್ರಜೆಗಳು. ಅವರ ಹಕ್ಕುಗಳಿಗೆ ಧಕ್ಕೆ ಬರಬಾರದು. ಅಂತಹ ಸಮಸ್ಯೆಗಳಿದ್ದರು ಅದನ್ನು ಅವರು ವಿಶೇಷ ಗ್ರಾಮಸಭೆಯಲ್ಲಿ ಮಂಡಿಸಿದರೆ ಸೂಕ್ತಪ್ರಯೋಜನ ದೊರಕುತ್ತದೆ ಎಂದು ಮಂಗಳೂರು ಪಡಿ ಸಂಸ್ಥೆಯ ಸಂಯೋಜಕಿ ಮಮತಾ ರೈ ಹೇಳಿದರು. ಇವರು ಸಂಟ್ಯಾರು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಮಕ್ಕಳ ಹಕ್ಕುಗಳಲ್ಲಿ ಮುಖವಾದುದು ನಾಲ್ಕು. ಅವುಗಳು ಬದುಕುವ ಹಕ್ಕು, ರಕ್ಷಣೆಯ ಹಕ್ಕು, ವಿಕಾಸ ಹಕ್ಕು, ಭಾಗವಹಿಸುವ ಹಕ್ಕು. ಹುಟ್ಟಿನಿಂದ ಮಗು ಬದುಕುವ ಹಕ್ಕನ್ನು ಪಡೆದು, ಸಮಾಜದ ಒಂದು ರೂಪವಾಗಿ ಬೆಳೆಯುತ್ತದೆ ನಂತರ ಸಮಾಜದ ಮುಖ್ಯವಾಹಿನಿಯಲ್ಲಿ ರಾಷ್ಟ್ರೀಯತೆಯ ಹಕ್ಕನ್ನು ಪಡೆಯುತ್ತಾ ಹೋಗುತ್ತಾರೆ. ಮಕ್ಕಳಿಗೆ ರಕ್ಷಣೆಯ ಜೊತೆಗೆ ಉತ್ತಮ ಶಿಕ್ಷಣ ದೊರಕಿ ಸತ್ಪ್ರಜೆಗಳಾಗಬೇಕು. ಶಾಲೆಗಳು ಮಗು ಸ್ನೇಹಿಯಾಗಬೇಕು. ಮಕ್ಕಳು ಭಯಮಕ್ತ ವಾತಾವರಣದಲ್ಲಿರಬೇಕು ಆಗಿದ್ದರೆ ಮಾತ್ರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬಹುದು ಎಂದರು.

ಮಹಿಳಾ ಮಕ್ಕಳ ಕಲ್ಯಾಣ ಇಲಾಖಾ ಮೇಲ್ವಿಚಾರಕಿ ಜಲಜಾಕ್ಷಿ ಮಕ್ಕಳ ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು. ನರಿಮೊಗರು ಶಿಕ್ಷಣ ಇಲಾಖೆಯ ಸಿಆರ್‌ಪಿ ದೇವಪ್ಪರವರು ಇಲಾಖೆಯಿಂದ ಉಚಿತವಾಗಿ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಶಾಲಾ ನಾಯಕಿ ಅನನ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ವಸಂತ ಶ್ರೀದುರ್ಗಾ, ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ್ ಮಕ್ಕಳ ಸಮಸ್ಯೆಗಳಿಗೆ ಉತ್ತರಿಸಿದರು. ಕಾರ್ಯದರ್ಶಿ ಪದ್ಮಾಕುಮಾರಿ ಕಳೆದ ವರ್ಷದ ಮಕ್ಕಳ ವಿಶೇಷ ಗ್ರಾಮಸಭೆಯ ವರದಿ ಮಂಡಿಸಿದರು. ಶಾಲಾ ಮಖ್ಯಶಿಕ್ಷಕಿ ಎಂ.ಜಾನಕಿ, ಗ್ರಾ.ಪಂ ಸದಸ್ಯರಾದ ವಿಜಯ ಕುಮಾರ್, ಜಯಂತ ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿ ಮುರ್ಷಿದಾ ಸ್ವಾಗತಿಸಿ, ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ಶ್ರೀಪಾದ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಜಯಶ್ರೀ ವಂದಿಸಿದರು. ನೆಹರು ಮೆಮೋರಿಯಲ್ ಕಾಲೇಜಿನ ಹರ್ಷ, ಧನ್ಯಶ್ರೀ ಮತ್ತು ಸಂಟ್ಯಾರು ಶಾಲಾ ಶಿಕ್ಷಕರು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.