Home_Page_Advt
Home_Page_Advt
Home_Page_Advt
Breaking News

ವಿಟ್ಲ: ಜೀಪಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ-ಸವಾರ ಮೃತ್ಯು

                        ಮಹಮ್ಮದ್ ಅಫ್ರಿದ್

ವಿಟ್ಲ:  ಜೀಪಿನ‌ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿ ಸವಾರ ಮೃತಪಟ್ಟ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ‌ ಒಕ್ಕೆತ್ತೂರು‌ ಸಮೀಪ ಮೇ.20ರಂದು ನಡೆದಿದೆ. ವಿಟ್ಲ ಕಸಬ ಗ್ರಾಮದ ಒಕ್ಕೆತ್ತೂರು ನಿವಾಸಿ ಕುಂಞ ಮೋನುರವರ ಪುತ್ರ ಮಹಮ್ಮದ್ ಅಫ್ರಿದ್(17 ವ.) ರವರು ಮೃತಪಟ್ಟವರಾಗಿದ್ದು, ಬೈಕ್ ಚಲಾಯಿಸುತ್ತಿದ್ದ ಒಕ್ಕೆತ್ತೂರು ನಿವಾಸಿ ಮಹಮ್ಮದ್ ಇಸಾಕ್ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಮಹಮ್ಮದ್  ಅಫ್ರಿದ್ ತನ್ನ ಸ್ನೇಹಿತ ಮಹಮ್ಮದ್ ಇಸಾಕ್ ನೊಂದಿಗೆ ತನ್ನ ಮನೆಯಿಂದ ವಿಟ್ಲ ಕಡೆಗೆ‌ ತೆರಳುತ್ತಿದ್ದಾಗ ವಿಟ್ಲ- ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಜೀಪಿನ ಚಾಲಕರೋರ್ವರು ಹಟತ್ತನೆ ಬ್ರೇಕ್ ಹಾಕಿದ್ದರಿಂದ ಇವರು ಸಂಚರಿಸುತ್ತಿದ್ದ ಬೈಕ್ ಜೀಪಿನ ಹಿಂಬಾಗಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ನ ಹಿಂಭಾಗದಲ್ಲಿ ಕುಳಿತಿದ್ದ ಮಹಮ್ಮದ್  ಅಫ್ರಿದ್ ರಸ್ತೆಗೆಸೆಯಲ್ಪಟ್ಟಿದ್ದರು. ಈ ವೇಳೆ ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನ ಚಕ್ರ ಮಹಮ್ಮದ್  ಅಫ್ರಿದ್ ರವರ ಮೇಲೆ ಚಲಿಸಿರುವುದರಿಂದ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಪೊಲೀಸರು‌ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.