HomePage_Banner
HomePage_Banner
HomePage_Banner
HomePage_Banner

ಶಕುಂತಳಾ ಶೆಟ್ಟಿ ವಿರುದ್ಧ ವಾಟ್ಸಾಪ್‌ನಲ್ಲಿ ಅವಹೇಳನ ಸಂದೇಶ: ಮಹಮ್ಮದ್ ಆಲಿ ವಿರುದ್ಧ ಪಕ್ಷದ ನಾಯಕರಿಗೆ ದೂರು – ಇಸಾಕ್ ಸಾಲ್ಮರ

HomePage_Banner
HomePage_Banner
HomePage_Banner
HomePage_Banner

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ ಶಕುಂತಳಾ ಶೆಟ್ಟಿಯವರನ್ನು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾಗಿರುವ ನಗರಸಭೆ ಸದಸ್ಯ ಮಹಮ್ಮದ್ ಆಲಿಯವರು ವಾಟ್ಸಾಪ್ ಗ್ರೂಪ್‌ನಲ್ಲಿ ಅವಹೇಳನ ಮಾಡಿರುವ ಕುರಿತು ಪಕ್ಷದ ನಾಯಕರುಗಳಿಗೆ ದೂರು ನೀಡಲಿದ್ದೇವೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ರಾಜ್ಯ ಪದಾಧಿಕಾರಿ ಇಸಾಕ್ ಸಾಲ್ಮರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಹಮ್ಮದ್ ಆಲಿಯವರು ಓರ್ವ ಜವಾಬ್ದಾರಿಯುತ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಾಗಿದ್ದು ಅವರು ತನ್ನದೇ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಗ್ರೂಪ್‌ವೊಂದಲ್ಲಿ ಶಕುಂತಳಾ ಶೆಟ್ಟಿ ವಿರುದ್ಧ ಅವಹೇಳನಕಾರಿಯಾಗಿ ಸಂದೇಶ ರವಾನಿಸಿದ್ದಾರೆ. ಸಂದೇಶದಲ್ಲಿ ಪುತ್ತೂರಿನಲ್ಲಿ ಕಾಂಗ್ರೆಸ್ ಸೋತಿರುವುದು ಕಾಂಗ್ರೆಸ್ ಹಿನ್ನಡೆಯಿಂದಲ್ಲ. ಮಾನ್ಯ ಶಕುಂತಳಾ ಶೆಟ್ಟಿಯವರ ದರ್ಪ, ಸರ್ವಾಧಿಕಾರ ಹಾಗೂ ದುರಹಂಕಾರದಿಂದ ಮಾತ್ರ. ಇದರಿಂದ ಕಂಗೆಟ್ಟ ಅದೆಷ್ಟು ಹುಟ್ಟು ಕಾಂಗ್ರೆಸ್ಸಿಗರು ಮಾನ್ಯ ಮಠಂದೂರು ಅವರಿಗೆ ಮತ ಚಲಾಯಿಸಬೇಕಾಯಿತು ಎಂಬುದನ್ನು ದೇವನೇ ಬಲ್ಲ. ಇನ್ನು ಮಾಜಿ ಶಾಸಕಿಯವರು ಪುತ್ತೂರಿನಲ್ಲಿ ಕಾಂಗ್ರೆಸ್ ಕಟ್ಟುವ ಬದಲು, ಮನೆಯಲ್ಲಿ ಕುಳಿತು ಬೀಡಿ ಕಟ್ಟುವುದು ಒಳಿತು ಎಂಬುದು ಪುತ್ತೂರಿನ ಬುದ್ದಿವಂತರ ಅಭಿಪ್ರಾಯ ಎಂದು ಸಂದೇಶ ರವಾನಿಸಿದ್ದಾರೆ.

ಈ ರೀತಿಯ ಸಂದೇಶ ಒಳ್ಳೆಯ ಲಕ್ಷಣವಲ್ಲ ಎಂದು ಹೇಳಿದ ಇಸಾಕ್ ಸಾಲ್ಮರ ಅವರು ನಾವು ಇದನ್ನು ಖಂಡಿಸುತ್ತೇವೆ ಎಂದು ಈ ಕುರಿತು ಪಕ್ಷದ ನಾಯಕರಿಗೆ ಮೌಖಿಕವಾಗಿ ದೂರು ನೀಡಿದ್ದೇವೆ. ಅವರು ಪತ್ರದ ಮೂಲಕ ದೂರು ನೀಡಲು ತಿಳಿಸಿದ್ದಾರೆ. ಅದೇ ರೀತಿ ಎರಡುಮೂರು ದಿನದಲ್ಲಿ ಕೆಪಿಸಿಸಿ, ಎಐಸಿಸಿ, ಇಲ್ಲಿನ ಉಸ್ತುವಾರಿಗಳಾದ ನಾರಾಯಣ ಸ್ವಾಮಿ, ಯು.ಪಿ.ವೆಂಕಟೇಶ್, ರಾಜ್ಯದ ಉಸ್ತುವಾರಿಯಾದಂತಹ ವಿಷ್ಣುನಾಥ್ ಮತ್ತು ವೇಣುಗೋಪಾಲ್ ಅವರಿಗೂ ಕೂಡಾ ಈ ದೂರು ನೀಡಲಿದ್ದೇವೆ ಎಂದು ಅವರು ಹೇಳಿದರು. ಈಗಾಗಲೇ ಪಕ್ಷವಿರೋಧಿ ಚಟುವಟಿಕೆ ಮಾಡಿದವರ ಕುರಿತು ವರದಿ ನೀಡಲು ಕೆಪಿಸಿಸಿಯಿಂದ ಎಲ್ಲಾ ಬ್ಲಾಕ್‌ಗಳಿಗೆ ನೋಟೀಸ್ ಬಂದಿದೆ. ಮುಂದಿದಿನಗಳಲ್ಲಿ ಮೀಟಿಂಗ್ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್‌ನ ಪದಾಧಿಕಾರಿ ಪಿಲಿಂಜ ಗಂಗಾಧರ ರೈ, ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಬೀಡಿ ಕಟ್ಟುವ ಮಹಿಳೆರಿಂದ ಪ್ರತಿಭಟನೆ ಸಂಭವ
ಬೀಡಿ ಕಟ್ಟುವುದು ಬಹಳಷ್ಟು ವರ್ಷಗಳಿಂದ ಎಲ್ಲಾ ಸಮಾಜದವರು ಮಾಡಿಕೊಂಡು ಬಂದ್ದಿದ್ದಾರೆ. ಇವತ್ತು ಸಮಾಜ ಸುಧಾರಣೆ ಆಗಿದೆ. ಹಾಗೆಂದು ಬೀಡಿ ಕಟ್ಟಿ ಬದುಕುತ್ತಿರುವ ಮಹಿಳೆಯರನ್ನು ಅವಮಾನ ಮಾಡಬಾರದು. ಶಕುಂತಳಾ ಶೆಟ್ಟಿಯವರನ್ನು ಬೀಡಿಕಟ್ಟಲು ಹೋಗಲು ಹೇಳಿರುವ ಮಹಮ್ಮದ್ ಆಲಿಯವರು ಬೀಡಿ ಕಟ್ಟುವ ಮಹಿಳೆಯರಿಗೆ ಮಾಡಿದ ಅವಮಾನ. ಮುಂದಿನ ದಿನಗಳಲ್ಲಿ ಬೀಡಿ ಕಟ್ಟುವ ಮಹಿಳೆಯರು ನಗರಸಭೆ ಮುಂದೆ ಪ್ರತಿಭಟನೆ ನಡೆಸುವ ಸಂದರ್ಭ ಬರಬಹುದು – ಇಸಾಕ್ ಸಾಲ್ಮರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

3 Comments

  1. ಸಂದೀಪ್

    ಇಂತಹ ನೀಚ ರಾಜಕೀಯ ವ್ಯಕ್ತಿಯನ್ನು ಸರ್ವ ಪಕ್ಷದಿಂದು ಹೊರಗೆ ಹಕಬೇಕಾಗಿ ವಿನಂತಿ. ಇಂಥ ದುಷ್ಟ ವ್ಯಕ್ತಿಗಳನ್ನು ಸಮಾಜ ಹೋರಾಗಿಡಕು.

    Reply
  2. ನರಸಿಂಹ ಭಂಡಾರಿ

    ಮಹಮ್ಮದಾಲಿಯವರು ಈತರಹ ಅವ ಹೇಳನ ಸಂದೇಶ ರವಾನಿಸಲಾರರು ಅವರೊಬ್ಬ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರು ಅವರ ವಿರೋಧಿಗಳು ನಂಬರ್ ಹೇಕ್ ಮಾಡಿರಬಹುದು ಹೇಕ್ ಮಾಡುವ ಜನರಿಗೇನೂ ನಮ್ಮೂರಿನಲ್ಲಿ ಕಡಿಮೆಯಿಲ್ಲ ಅವರು ತಮ್ಮ ಪ್ರೈವೇಶಿಸೆಟ್ಟಿಂಗ್ ಮಾಡುವುದು ಒಳಿತು ಇನ್ನೇನು ಮೋದಿಯವರಿಗೇ ಜನರು ಬಿಡುವುದಿಲ್ಲ ಆದರ ಕೊಡುವುದನ್ನೇ ಜನ ಮರೆತ್ತಿದ್ದಾರೆ ಅಂಥದರಲ್ಲಿ ಈತರಹ ವಿಷಯಗಳು ಸಹಜವಾಗಿ ಅತರ್ಜಾಲದಲ್ಲಿ ನೋಡಲು ಸಿಗುತ್ತದೆ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.