Home_Page_Advt
Home_Page_Advt
Home_Page_Advt
Breaking News

ಬೆಟ್ಟಂಪಾಡಿ ಹಾ.ಉ.ಸ.ಸಂಘದ ವಾರ್ಷಿಕ ಸಾಮಾನ್ಯ ಸಭೆ

  • ಶೇ. 15 ಡೆವಿಡೆಂಡ್, ಲೀಟರಿಗೆ 59.6 ಪೈಸೆ ಬೋನಸ್ ಘೋಷಣೆ

ನಿಡ್ಪಳ್ಳಿ: 2017-18 ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿ ರೂ. 2,24,048.41 ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.15 ಡೆವಿಡೆಂಡ್ ಹಾಗೂ ಪ್ರತೀ ಲೀಟರ್ ಹಾಲಿಗೆ 59.6 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ ತಿಳಿಸಿದರು.

ಅವರು ಸೆ. 4 ರಂದು ಸಂಘದ ವಠಾರದಲ್ಲಿ ನಡೆದ ಸಂಘದ 2017-18 ನೇ ಸಾಲಿನ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸದಸ್ಯರ ಉತ್ತಮ ಸಹಕಾರದಿಂದ ಈ ಸಾಲಿನಲ್ಲಿ ದ.ಕ.ಹಾಲು ಒಕ್ಕೂಟದಿಂದ ನಮ್ಮ ಸಂಘಕ್ಕೆ ಸಾಧನಾ ಪ್ರಶಸ್ತಿ  ಲಭಿಸಿದ್ದು  ಸಂಘದ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸರ್ವರ ಸಹಕಾರ ಯಾಚಿಸಿದರು.

ನವೋದಯ ಪ್ರೌಢಶಾಲಾ ನಿವೃತ್ತ ಮುಖ್ಯ ಗುರು ವೆಂಕಟ್ರಮಣ ಭಟ್ ಮಂಜುಳ ಗಿರಿ ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.     ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ವಿಸ್ತರಣಾಧಿಕಾರಿ ಎಂ.ಶ್ರೀನಿವಾಸ ಮಾಹಿತಿ ನೀಡಿದರು. ಒಕ್ಕೂಟದ ಡಾ.ಪ್ರಕಾಶ್, ಸಂಘದ ಉಪಾಧ್ಯಕ್ಷೆ ದೇವಕಿ ದೇವಿ, ನಿರ್ದೇಶಕರಾದ ಬಿ.ವೆಂಕಟ್ರಾವ್, ಎಂ.ಶೇಷಪ್ಪ ರೈ , ಶಂಕರನಾರಾಯಣ ರಾವ್, ವಿನೋದ್ ಕುಮಾರ್ ಬಲ್ಲಾಳ್, ಕೆ.ತ್ಯಾಂಪ ನಾಯ್ಕ, ಬಿ.ಪ್ರಭಾಕರ ರೈ, ಪ್ರಮೋದ ರೈ, ಪಿ.ಜಗದೀಶ ಗೌಡ, ಯತೀಶ ಗೌಡ, ರತ್ನಾವತಿ, ಕು.ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಪ್ರಗತಿಪರ ಕೃಷಿಕರೂ ಸಂಘದ ಸ್ಥಾಪಕ ಅಧ್ಯಕ್ಷ ಕೆ. ಸಂಜೀವ ಕೊಮ್ಮಂಡ ಹಾಗೂ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸಂಘದ ನಿರ್ದೇಶಕ ಪ್ರಭಾಕರ ರೈ ಬಾಜುವಳ್ಳಿಯವರ ಪುತ್ರ ಶ್ರೀಜಿತ್ ರೈ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಬಹುಮಾನ ವಿತರಣೆ:  ಪ್ರಸ್ತುತ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ  ತ್ಯಾಂಪ ನಾಯ್ಕ ಕಜೆ ಪ್ರಥಮ, ಶಂಕರನಾರಾಯಣ ರಾವ್ ಪಾರ ದ್ವಿತೀಯ ಹಾಗೂ ಅನಿತಾ ಕುವೆಂಜ ತೃತೀಯ ಬಹುಮಾನ ಪಡೆದು ಕೊಂಡರು. ಅಲ್ಲದೆ  ಹಾಲು ಪೂರೈಸಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಸದಸ್ಯ ಶ್ಯಾಮ್ ಪ್ರಸಾದ್ ಮಜಲುಗುಡ್ಡೆ ಪ್ರಾರ್ಥಿಸಿ, ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ ವರದಿ ವರದಿ ವಾಚಿಸಿದರು. ಸಂಘದ ಸಿಬ್ಬಂದಿಗಳಾದ ಉಚಿತ್ ಕುಮಾರ್, ಕುಂಞಕೃಷ್ಣ ಮಣಿಯಾಣಿ ಸಹಕರಿಸಿದರು.ಸಂಘದ ಸದಸ್ಯರು ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.