Home_Page_Advt
Home_Page_Advt
Home_Page_Advt
Breaking News

ಹೊಟೇಲ್ ಕ್ಲೀನರ್‌ ಲಿಂಗಪ್ಪ ಪೂಜಾರಿ ಮೃತ ದೇಹ ಸರಕಾರಿ ಬಾವಿಯಲ್ಲಿ ಪತ್ತೆ


ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಹೊಟೇಲ್‌ವೊಂದರ ಕ್ಲೀನರ್‌ನ ಮೃತ ದೇಹ ಇಲ್ಲಿನ ಅರುಣಾ ಚಿತ್ರಮಂದಿರದ ಬಳಿಯ ಎಪಿಎಂಸಿ ರಸ್ತೆಗೆ ತೆರಳುವ ಬಳಿ ಇರುವ ಸರಕಾರಿ ಬಾವಿಯಲ್ಲಿ ಎ.18ರಂದು ಪತ್ತೆಯಾಗಿದೆ.

ಅಜ್ಜಿಕಲ್ಲು ನಿವಾಸಿ ಲಿಂಗಪ್ಪ ಪೂಜಾರಿ(40ವ) ಎಂಬವರು ಮೃತಪಟ್ಟವರು. ಅವರು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಹೊಟೇಲ್ ಶ್ರೀಲಕ್ಷ್ಮೀಯಲ್ಲಿ ಹಲವಾರು ವರ್ಷಗಳಿಂದ ಕ್ಲೀನರ್ ಆಗಿ ದುಡಿಯುತ್ತಿದ್ದು, ಏ.16ರಂದು ರಾತ್ರಿ ಪುತ್ತೂರು ಜಾತ್ರೆಗೆ ಹೋಗುತ್ತೇನೆಂದು ಹೋದವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಹೊಟೇಲ್‌ನ ಮಾಲಕರು ಮತ್ತು ಸಿಬಂದಿಗಳು ಹುಟುಕಾಟ ನಡೆಸಿದ್ದರು.

ಏ.18ರಂದು ಅರುಣಾ ಚಿತ್ರ ಮಂದಿರದ ಬಳಿಯ ಸರಕಾರಿ ಬಾವಿಯಲ್ಲಿ ಪಕ್ಕದ ಕೋಳಿ ಅಂಗಡಿಯವರು ಬಾವಿಯಿಂದ ನೀರು ತೆಗೆಯಲೆಂದು ತಂಬಿಗೆಯನ್ನು ಬಾವಿಗೆ ಇಳಿಸಿದಾಗ ಬಾವಿಯಲ್ಲಿ ಮೃತ ದೇಹ ಇರುವುದು ಪತ್ತೆಯಾಗಿದೆ. ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ದಳದವರು ಬಂದು ಬಾವಿಯಿಂದ ಮೃತ ದೇಹ ಮೇಲಕ್ಕೆ ತೆಗೆದಾಗ ಮೃತ ದೇಹ ಲಿಂಗಪ್ಪ ಪೂಜಾರಿ ಅವರದ್ದು ಎಂದು ಸ್ಥಳೀಯರು ಗುರುತಿಸಿದರು. ಬಳಿಕ ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.