ಬಲ್ಯದಲ್ಲಿ ಅಪಘಾತ: ಬೈಕ್ ಸವಾರ ಮೋಕ್ಷಿತ್ ದುರ್ಮರಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಡಬ ಸಮೀಪದ ಬಲ್ಯ ಪರಂಕಾಜೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ  ಬಲ್ಯ ಗ್ರಾಮದ ಮತ್ರಾಡಿ ರಾಮಚಂದ್ರ ರವರ ಮಗ ಮೋಕ್ಷಿತ್(20)ರವರು ಮೃತಪಟ್ಟ ಘಟನೆ ಜೂ.13 ರಂದು ನಡೆದಿದೆ.

ಕಡಬದಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಹಾಗೂ ಬಲ್ಯ ಪದವಿನಿಂದ ಕಡಬಕ್ಕೆ ಚಲಿಸುತ್ತಿದ್ದ ಬೈಕ್ ನಡುವೆ ಬಲ್ಯ ಪರಂಕಾಜೆಯಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಚಲಾಯಿಸುತ್ತಿದ್ದ ಮೋಕ್ಷಿತ್ ರವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮೃತ ದೇಹವನ್ನು ಕಡಬ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀನೆ ನಡೆಸಿದ್ದಾರೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.