Home_Page_Advt
Home_Page_Advt
Home_Page_Advt
Breaking News

ಓವರ್‌ಟೇಕ್ ಭರಾಟೆ: ಕುಂಬ್ರದಲ್ಲಿ ಸರಣಿ ಅಪಘಾತ, ಇಬ್ಬರಿಗೆ ಗಾಯ

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಶೇಖಮಲೆ ತಿರುವಿನಲ್ಲಿ ಜೂ.17 ರಂದು ಓವರ್‌ಟೇಕ್ ಮಾಡುವ ಭರಾಟೆಯಲ್ಲಿ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಮಡಿಕೇರಿ ಕಡೆಯಿಂದ ಬರುತ್ತಿದ್ದ ಮಾರುತಿ ಜಿಪ್ಸಿ ಕುಂಬ್ರ ಸಮೀಪಿಸುತ್ತಿದ್ದಂತೆ ತನ್ನ ಮುಂದಿನಿಂದ ಹೋಗುತ್ತಿದ್ದ ಬೈಕ್‌ನ್ನು ಹಿಂದಿಕ್ಕುವ ಭರದಲ್ಲಿ ಸುಳ್ಯ ಕಡೆ ಹೋಗುತ್ತಿದ್ದ ಪ್ರಯಾಣಿಕರಿಲ್ಲದ ಖಾಸಗಿ ಬಸ್‌ಗೆ ಡಿಕ್ಕಿಯಾಗಿ, ಬೈಕ್‌ಗೂ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ, ದೇಲಂಪಾಡಿಯ ಜಿತೇಶ್ ಅವರ ಪತ್ನಿ ಸವಿತಾ ಮತ್ತು ಮಾರುತಿ ಜಿಪ್ಸಿ ವಾಹನ ಚಾಲಕ ಮಡಿಕೇರಿಯ ರೋಶನ್ ಅವರ ತಾಯಿ ಸ್ಟೆಪಿನ್ ಪಿಂಟೋ (75ವ) ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಸ್ಟೆಪಿನ್ ಪಿಂಟೋ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಸವಿತಾ ಅವರು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಚಾಲಕ ಜಿತೇಶ್ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಿಂದಾಗಿ ಮೂರು ವಾಹನಗಳಿಗೂ ಹಾನಿಯಾಗಿದೆ.
ಹಂಪ್ಸ್ ಅಳವಡಿಸಲು ಒತ್ತಾಯ: ಶೇಖಮಲೆಯ ಈ ತಿರುವು ಅಪಾಯಕಾರಿಯಾಗಿದ್ದು ಈ ಹಿಂದೆಯೂ ಹಲವು ಬಾರಿ ಅಪಘಾತಗಳು ಸಂಭವಿಸಿದೆ. ಕುಂಬ್ರ ಕಡೆಯಿಂದ ತೆರಳುವ ವಾಹನಗಳಿಗೆ ತಿರುವಿನಲ್ಲಿ ಸುಳ್ಯ ಕಡೆಯಿಂದ ಬರುವ ವಾಹನಗಳು ಕಾಣದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ರಸ್ತೆ ಅಗಲವಾಗಿರುವ ಕಾರಣ ವಾಹನಗಳನ್ನು ಅತೀ ವೇಗದಿಂದ ಚಲಾಯಿಸುವ ಕಾರಣ ತಿರುವಿನಲ್ಲಿ ನಿಯಂತ್ರಣಕ್ಕೆ ಸಿಗದೆ ಅಪಘಾತಗಳು ಸಂಭವಿಸುತ್ತಿದೆ. ವೇಗ ನಿಯಂತ್ರಣಕ್ಕೆ ಎರಡೂ ಕಡೆಗಳಲ್ಲಿ ಹಂಪ್ಸ್ ಅಳವಡಿಸಬೇಕೆಂದು ವಾಹನ ಚಾಲಕರು ಒತ್ತಾಯಿಸಿದ್ದಾರೆ. ಹಂಪ್ಸ್ ಹಾಕಲು ಸಾಧ್ಯವಿಲ್ಲದೇ ಇದ್ದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಪಘಾತವನ್ನು ನಿಯಂತ್ರಿಸುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.