ನೆಲ್ಯಾಡಿಯಲ್ಲಿ ಭೀಕರ ಅಪಘಾತ – ಮೂರು ಸಾವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾರಿ ಹಾಗೂ ಬೊಲೆರೋ ಜೀಪೊಂದು ಮುಖಾಮುಖಿ ಡಿಕ್ಕಿಯಾಗಿ ಬೊಲೆರೋ ಜೀಪಿನಲ್ಲಿದ್ದ ಮೂವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ನೆಲ್ಯಾಡಿಯಲ್ಲಿ  ರಾತ್ರಿ ನಡೆದಿದೆ.

ಅಪಘಾತದಿಂದ ಬೊಲೆರೋ ಜೀಪಿನಲ್ಲಿದ್ದ ಅಬ್ದುಲ್ ಸತ್ತಾರ್ ಮರಂಕಲ, ಗೋಳಿತೊಟ್ಟಿನ ಸೈರಸ್ ಸ್ಥಳದಲ್ಲಿಯೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಶ್ಯಾಂಸನ್ ಹಾಗೂ ಜನಾರ್ದನ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಶ್ಯಾಂಸನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೊಲೆರೋದಲ್ಲಿದ್ದವರು ನೆಲ್ಯಾಡಿ, ಗೋಳಿತೊಟ್ಟು ಪರಿಸರದವರು.

ಜು.1 ರಂದು ರಾತ್ರಿ 11:20 ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ನೆಲ್ಯಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬೊಲೆರೋ ವಾಹನಕ್ಕೆ ನೆಲ್ಯಾಡಿ ಹಳ್ಳ ಸೇತುವೆಯ ಬಳಿ ಮಂಗಳೂರಿನಿಂದ ಹಾಸನ ಕಡೆ ತೆರಳುತ್ತಿರುವ ಲಾರಿ ಮುಖಾಮುಖಿ ಡಿಕ್ಕಿ ಹೊಡೆಯಿತು.

ಸತ್ತರ್
ಸೈರಸ್
ಶ್ಯಾಂಸನ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.