Home_Page_Advt
Home_Page_Advt
Home_Page_Advt
Breaking News

ಕಾವು: ಓವರ್‌ಟೇಕ್ ಭರದಲ್ಲಿ ಓಮ್ನಿಗೆ ಡಿಕ್ಕಿ ಹೊಡೆದ ಬೈಕ್ – ಅಪಾಯ ತಪ್ಪಿಸಲೆತ್ನಿಸಿ ಪಲ್ಟಿಯಾದ ಓಮ್ನಿ

ವರದಿ: ಸುನೀಲ್ ಕಾವು

  • ಬೈಕ್ ಸವಾರ, ಓಮ್ನಿಯಲ್ಲಿದವರೆಲ್ಲಾ ಅಪಾಯದಿಂದ ಪಾರು

ಕಾವು: ಓವರ್‌ಟೇಕ್ ಮಾಡುವ ಭರದಲ್ಲಿ ಬೈಕೊಂದು ಓಮ್ನಿ ಕಾರಿಗೆ ಡಿಕ್ಕಿ ಹೊಡೆದು, ಓಮ್ನಿ ಕಾರು ಮಾರ್ಗಮಧ್ಯದಲ್ಲೇ ಪಲ್ಟಿಯಾದ ಘಟನೆ ಜು.29ರಂದು ಕಾವು ಶಿವಪೇಟೆಯಲ್ಲಿ ನಡೆದಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರಿಗೆ, ಪುತ್ತೂರು ಕಡೆಯಿಂದ ಬರುತ್ತಿದ್ದ ಬೈಕೊಂದು ವಿರುದ್ಧ ದಿಕ್ಕಿನಲ್ಲಿ ಬಂದು ಢಿಕ್ಕಿ ಹೊಡೆದಿದೆ.

ಅಪಾಯ ತಪ್ಪಿಸಲೆತ್ತಿಸಿ ಪಲ್ಟಿಯಾದ ಕಾರು:
ಬೈಕ್ ವಿರುದ್ಧ ದಿಕ್ಕಿನಿಂದ ಬಂದು ಢಿಕ್ಕಿ ಹೊಡೆದಾಗ ಅಪಾಯವನ್ನು ತಪ್ಪಿಸಲೆತ್ನಿಸಿದ ಓಮ್ನಿ ಚಾಲಕ ತಕ್ಷಣವೇ ದಿಢೀರ್ ಬ್ರೇಕ್ ಹೊಡೆದ ಪರಿಣಾಮ ಓಮ್ನಿ ಮಾರ್ಗ ಮಧ್ಯದಲ್ಲೇ ಪಲ್ಟಿಯಾಗಿದೆ.

ಅಪಾಯದಿಂದ ಪಾರು:
ಓಮ್ನಿ ಪಲ್ಟಿಯಾದ ತಕ್ಷಣವೇ ಅಲ್ಲಿದ್ದ ಸಾರ್ವಜನಿಕರೆಲ್ಲರೂ ಸೇರಿ ಕೂಡಲೇ ಓಮ್ನಿಯನ್ನು ಮೇಲಕ್ಕೆತ್ತಿ ಸಹಕರಿಸಿದ ಪರಿಣಾಮ ಚಾಲಕ ಸೇರಿದಂತೆ ಓಮ್ನಿಯಲ್ಲಿದವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರನು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.