Home_Page_Advt
Home_Page_Advt
Home_Page_Advt
Breaking News

ಸಂಪ್ಯ: ಹಿಂದೂಸ್ಥಾನ್ ವುಡ್ ಆಂಡ್ ಫರ್ನಿಚರ್ ಶುಭಾರಂಭ

  • ಸೇವೆಯೇ ವ್ಯವಹಾರದ ಮುಖ್ಯ ಉದ್ದೇಶವಾಗಿರಲಿ: ದಿನೇಶ್ ಮೆದು

ಪುತ್ತೂರು: ಸಂಪ್ಯ ಜುಮಾ ಮಸೀದಿ ಕಟ್ಟಡದಲ್ಲಿ ನೂತನವಾಗಿ ಹಿಂದೂಸ್ಥಾನ್ ವುಡ್ ಆಂಡ್ ಫರ್ನಿಚರ್ ಜು. 29ರಂದು ಶುಭಾರಂಭಗೊಂಡಿತು. ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್‌ರವರು ಮಳಿಗೆಯನ್ನು ದುವಾ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ವ್ಯವಹಾರವು ಪ್ರಾಣಿಕತೆಯಿಂದ ಕೂಡಿರಬೇಕು. ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಜನರ ವಿಶ್ವಾಸಗಳಿಸಲು ಸಾಧ್ಯವಾಗುತ್ತದೆ. ಸಂಪ್ಯದಲ್ಲಿ ಆರಂಭಗೊಂಡ ಹಿಂದೂಸ್ಥಾನ್ ಫರ್ನಿಚರ್ ಮಳಿಗೆಯು ಅಭಿವೃದ್ದಿಹೊಂದಲಿ ಎಂದು ಶುಭ ಹಾರೈಸಿದರು.

ಸಂಪ್ಯ ಖತೀಬ್ ಅಬ್ದುಲ್ ಹಮೀದ್ ದಾರಿಮಿ, ಕುಟಿನೋಪ್ಪಿನಡ್ಕ ಜುಮಾ ಮಸೀದಿಯ ಗೌರವಾಧ್ಯಕ್ಷರಾದ ಸಯ್ಯದ್ ಮುಝಮ್ಮಿಲ್ ತಂಙಳ್ ಮೌಲೀದ್ ಪಾರಾಯಣ ಮಾಡಿ ದುವಾ ನೆರವೇರಿಸಿದರು. ಕುಟಿನೋಪ್ಪಿನಡ್ಕ ಖತೀಬ್ ಅಬ್ದುಲ್ ರಝಾಕ್ ಅಲ್ ಖಾಸಿಮಿ ಉಪಸ್ಥಿತರಿದ್ದರು.ಹಿಂದೂಸ್ಥಾನ್ ವುಡ್ ಇಂಡಸ್ಟ್ರೀ ಕೊಠಡಿಯನ್ನು ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷ ದಿನೇಶ್ ಮೆದು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ವ್ಯವಹಾರ ಮಾಡುವುದಾದರೂ ಸೇವೆಯೇ ಅದರ ಮುಖ್ಯ ಉದ್ದೇಶವಾಗಿರಬೇಕು. ಉತ್ತಮ ಗುಣಮಟ್ಟದ ಪೀಠೋಪಕರಣಗಳಿಗೆ ಹೆಸರುವಾಸಿಯಾಗುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು. ಗ್ರಾಹಕರಿಗೆ ನಾವು ನೀಡುವ ಸೇವೆ ಅದು ತೃಪ್ತಿಕರವಾಗಿರಬೇಕು ಆಗಿದ್ದಲ್ಲಿ ಸಂಸ್ಥೆ ಉತ್ತರೋತ್ತರ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ. ಸಂಪ್ಯದಲ್ಲಿ ನೂತನವಾಗಿ ಉದ್ಘಾಟನೆಗೊಂಡ ಸಂಸ್ಥೆಯು ಈ ಭಾಗದ ಜನರ ಪ್ರಮುಖ ವ್ಯವಹಾರ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.

ಫರ್ನಿಚರ್‍ಸ್ ಕೊಠಡಿಯನ್ನು ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಜಲೀಲ್ ಹಾಜಿ ಹಾಗೂ ಡಾ. ಅಶ್ರಫ್ ಕಮ್ಮಾಡಿಯವರು ಜಂಟಿಯಾಗಿ ಉದ್ಘಾಟಿಸಿ ಸಂಸ್ಥೆಯು ಜನಮೆಚ್ಚುಗೆಗಳಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿಜಯಾ ಬಿ ಎಸ್, ಪಿಂಗಾರ ಕಾಂಪ್ಲೆಕ್ಸ್ ಮಾಲಕ ದೇವಿಪ್ರಸಾದ್, ಅಬ್ದುಲ್ ಜಲೀಲ್ ಕಲಾರ, ಕೆಎಂಕೆ ವುಡ್ ಇಂಡಸ್ಟ್ರೀಸ್ ಮಾಲಕ ಅಬ್ದುಲ್ ರಝಾಕ್, ಎಸ್ ಜಬ್ಬಾರ್ ಸಂಪ್ಯ, ಅಬ್ದುಲ್ಲ ಹಸ, ಟಿಂಬರ್ ಮರ್ಚೆಂಟ್ ಕೆ ಪಿ ಹಸನ್ ಪರ್ಪುಂಜ, ಅಬ್ದುಲ್ ರಹಿಮಾನ್ ಕವು ,ಸಂಪ್ಯ ಜುಮಾ ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ, ಸಲಾಂ ಸಂಪ್ಯ, ಹನೀಫ್ ಮುಂಡೂರು, ಆದಂ ಹಾಜಿ ಮಕ್ಕಾ, ಮಹಮ್ಮದ್ ಕುಂಞಿ ಎಂಎಂಕೆ, ಸಂಶುದ್ದೀನ್ ಸಂಪ್ಯ, ಹುಸೈನ್ ನಂದಿನಿ, ಶಾನ್ ಖಾದರ್, ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಅಬ್ದುಲ್ ಅಝೀಝ್ ಬುಶ್ರಾ, ಇಬ್ರಾಹಿಂ ಬಿ ಕೆ ಕಾವು, ಕುಟಿನೋಪ್ಪಿನಡ್ಕ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಹಬೀಬ್ ಕೆಂಪಿ, ಶರೀಫ್ ಕಿನ್ಸ್, ಇಸ್ಮಾಯಿಲ್ ಡಿಂಬ್ರಿ, ಮುಸ್ಥಫಾ ಆರ್ಯಾಪು, ಬಶೀರ್ ವಾಗ್ಲೆ, ಮುಸ್ಥಫಾ ಕೆ ಪಿ, ಅಶ್ರಫ್ ಕ್ವಾಲಿಸ್, ದಾವೂದ್ ತಾಜ್, ಬಶೀರ್ ಇಡಿಂಜಿಲ ಖಾಲಿದ್ ಕುಟ್ಯಾಡಿ, ಇಬ್ರಾಹಿಂ ವಿ ಮಾರ್ಟ್, ಫಾರೂಕ್ ಶಮಾಸ್, ಅಲ್‌ಖಲೀಜ್ ಟ್ರಾವೆಲ್ಸ್ ಮಾಲಕ ನಿಝಾರ್ ಸಂಪ್ಯ ಮತ್ತಿತರರು ಉಪಸ್ಥಿತರಿದ್ದರು.

ಮಾಲಕರಾದ ಕೆ ಪಿ ಮಹಮ್ಮದ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ನಮ್ಮ ಮಳಿಗೆಯಲ್ಲಿ ಸ್ವಂತ ತಯಾರಿಕೆಯ ಗೃಹೋಪಯೋಗಿ ಪೀಠೋಪಕರಣಗಳು, ಸೋಫಾ ಸೆಟ್, ಕೋಟ್, ವಿವಿಧ ವಿನ್ಯಾಸದ ಚೆಯರ್‌ಗಳು, ಮರದ ಕೆತ್ತನೆಯ ಬಾಗಿಲುಗಳು, ದಾರಂದಗಳು, ಕಿಟಕಿಗಳು,ಬ್ರಾಂಡೆಡ್ ಪ್ಲೈವುಡ್‌ಗಳು, ಡೈನಿಂಗ್ ಟೇಬಲ್‌ಗಳು ಲಭ್ಯವಿದೆ. ಎಲ್ಲಾ ಪೀಠೋಪಕರಣಗಳು ಸ್ವಂತ ತಯಾರಿಕೆಯಲ್ಲಿ ಮಾಡಲಾಗಿದ್ದು ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಲಾಗುತ್ತದೆ ಸಹಕರಿಸುವಂತೆ ಮನವಿ ಮಾಡಿದರು. ಹಮೀದಾಲೀಸ್ ಸಂಟ್ಯಾರ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.