Home_Page_Advt
Home_Page_Advt
Breaking News

ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ವರುಷದ ಸಂಭ್ರಮಾಚರಣೆ ಉದ್ಘಾಟನೆ – ಗ್ರಾಹಕರಿಗೆ ಭರ್ಜರಿ ಆಫರ್

ಪುತ್ತೂರು:  ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಅಲುಕ್ಕಾಸ್ ಜ್ಯುವೆಲ್ಲರಿಯ ಪುತ್ತೂರಿನ ಶಾಖೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ಸುನಿಲ್ದಾಣದ ಹಿಂದುಸ್ಥಾನ್ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡು ಒಂದು ವರುಷ ಪೂರೈಸಿದ ನಿಟ್ಟಿನಲ್ಲಿ ಶಾಖೆಯಲ್ಲಿ ವರಷದ  ಸಂಭ್ರಮಾಚರಣೆಗೆ  ಚಾಲನೆ‌ ನೀಡಲಾಯಿತು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ ಯವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಕೇಕ್ ಕಟ್ ಮಾಡುವ ಮೂಲಕ  ತುಳು ಚಲನಚಿತ್ರ ನಟ ಅರವಿಂದ ಬೋಳಾರ್ ರವರು ಸಂಭ್ರಮಾಚರಣೆಯನ್ನು ಉದ್ಘಾಟಿಸಿದರು.

ಕನ್ನಡ, ತುಳು ಚಲನಚಿತ್ರ ನಟಿ, ಕನ್ನಡ ಕಿರುತೆರೆ ನಟಿ ರಾಧಿಕಾ ರಾವ್ ರವರು ನೂತನ ಮಾದರಿಯ ಚಿನ್ನಾಭರಣಗಳನ್ನು ಅನಾವರಣಗೊಳಿಸಿ ಶುಭಹಾರೈಸಿದರು.

ತುಳು, ಕನ್ನಡ ಹಾಗೂ ಮಲಯಾಳಂ ಚಲನಚಿತ್ರ ವಿತರಕರಾದ ಬಾಲಕೃಷ್ಣ  ಶೆಟ್ಟಿ, ಏರಿಯಾ ಮ್ಯಾನೆಜರ್ ಬಿಜು ಟಿ.ಎಲ್, ಪುತ್ತೂರು‌ ಮಳಿಗೆಯ ಮ್ಯಾನೇಜರ್ ರತೀಶ್, ಸಹಾಯಕ ಪ್ರಬಂಧಕ ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬಂಧಿ ರಾಕೇಶ್ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಥಮ ವಾರ್ಷಿಕೋತ್ಸವಕ್ಕೆ ಭರ್ಜರಿ ಆಫರ್:
ಪ್ರಥಮ ವಾರ್ಷಿಕ ಸಂಭ್ರಮಾಚರಣೆಯ ಅಂಗವಾಗಿ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡುವುದರ ಮೂಲಕ ಅದ್ದೂರಿಯಗಿ ಆಚರಣೆ  ಮಾಡಲಾಗುತ್ತಿದೆ. ಹೊಸ ಸ್ಟಾಕ್, ಹೊಸ ಸಂಗ್ರಹಗಳು ಮತ್ತು ಹೊಚ್ಚ ಹೊಸ ಅನುಭವವನ್ನು ತನ್ನ ಗ್ರಾಹಕರಿಗೆ ನೀಡಲು ಸಂಸ್ಥೆ ಸಿದ್ಧವಾಗಿದೆ. ಅಲ್ಲದೇ ಮದುವೆ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಘೋಷಿಸಿದೆ.

         ವಾರ್ಷಿಕೋತ್ಸವ ಆಫರ್‌ಗಳು

  • ರೂ. 30 ಸಾವಿರ ಬೆಲೆಯ ಚಿನ್ನಾಭರಣ ಖರೀದಿಗೆ ಒಂದು ಚಿನ್ನದ ನಾಣ್ಯ ಉಚಿತ
  • ರೂ. 50 ಸಾವಿರ ಬೆಲೆಯ ವಜ್ರಗಳ ಖರೀದಿಗೆ ಒಂದು ಚಿನ್ನದ ನಾಣ್ಯ ಉಚಿತ
  • ವಜ್ರಗಳ ಮೇಲೆ ಶೇ. 20 ರಿಯಾಯಿತಿ
  • ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜಸ್ ಮೇಲೆ ಶೇ. 35 ರಿಯಾಯಿತಿ
  • ಹಳೆಯ 22 ಕ್ಯಾರೆಟ್ ಚಿನ್ನಕ್ಕೆ ಶೇ. 100 ವಿನಿಮಯ ಬೆಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.