Home_Page_Advt
Home_Page_Advt
Home_Page_Advt
Breaking News

ನಿಮ್ಮ ಆರೋಗ್ಯದ ಸಂಪೂರ್ಣ ನಿಗಾ ತೆಗೆದುಕೊಳ್ಳಲು ಬರುತ್ತಿದೆ, ‘ಗೂಗಲ್ ಫಿಟ್’

ಇಂದಿನ ಯುಗಮಾನದಲ್ಲಿ ನಿದ್ರೆಯದೂ ಒಂದು ಸಮಸ್ಯೆ! ನಿಜ, ಎಷ್ಟೋ ಜನರಿಗೆ ತಾವು ಸಾಕಷ್ಟು ನಿದ್ರೆ ಮಾಡುತ್ತಿದ್ದೇವೋ, ಇಲ್ಲವೋ ಎಂಬ ವಿಚಾರದ ಅರಿವು ಇಲ್ಲ.

ಒತ್ತಡದ ದಿನಚರಿ, ಗಂಟೆಗಟ್ಟಲೆ ಕಂಪ್ಯೂಟರ್ ಸ್ರ್ಕೀನ್ ನೋಡುವುದು, ಮತ್ತಷ್ಟು ಸ್ಮಾರ್ಟ್‌ಫೋನ್ ಚಟುವಟಿಕೆ – ಇವೆಲ್ಲವೂ ಇಂದಿನ ಜನಾಂಗದ ನಿದ್ದೆಗೆ ನಾನಾ ರೀತಿಯ ತೊಡಕುಗಳು.

ಒಬ್ಬ ವ್ಯಕ್ತಿ ಸಾಕಷ್ಟು ನಿದ್ದೆ ಮಾಡುತ್ತಿದ್ದಾನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದೇ ಇಂದಿನ ಸಮಸ್ಯೆಯೂ ಆಗಿದೆ.
ಗೂಗಲ್ ಫಿಟ್ ಇದಕ್ಕೆಲ್ಲ ಸಣ್ಣ ಮಟ್ಟಿಗಿನ ಉತ್ತರವನ್ನು ನೀಡಲು ಪ್ರಯತ್ನಮಾಡಿದೆ ಎನ್ನಬಹುದು.

ಒಬ್ಬ ವ್ಯಕ್ತಿಯ ದೈಹಿಕ ಚಟುವಟಿಕೆಗಳನ್ನು ಟ್ರಾಕ್ ಮಾಡುವ ಉದ್ದೇಶದಿಂದ ಬಿಡುಗಡೆಯಾಗಿರುವ ಗೂಗಲ್ ಫಿಟ್, ವ್ಯಕ್ತಿಯ ನಿದ್ದೆಯನ್ನು ಸಹ ಲೆಕ್ಕಹಾಕಬಲ್ಲದು. ಇದರಿಂದಾಗಿ, ಆ ವ್ಯಕ್ತಿಗೆ ಇನ್ನಷ್ಟು ನಿದ್ದೆ ಬೇಕೇ ಬೇಡವೇ ಎಂಬುದನ್ನು ಗುರುತಿಸಿಕೊಳ್ಳಲು ಸಾಧ್ಯ. ವ್ಯಕ್ತಿಯು ಅಲ್ಲಿನ ಡಾಟಾವನ್ನು ಎಡಿಟ್ ಮಾಡುವ ಮೂಲಕ ನಿದ್ದೆಯ ಪ್ರಮಾಣವನ್ನು ಲೆಕ್ಕಹಾಕಲು ಈ ಆಪ್‌ನ್ನು ಉಪಯೋಗಿಸಿಕೊಳ್ಳಬಹುದು.

ಜತೆಗೆ ದಿನದ ಚಟುವಟಿಕೆಗಳನ್ನು ಸಹ ಈ ಆಪ್‌ನ ಮೂಲಕ ಉತ್ತಮಪಡಿಸಿಕೊಳ್ಳಬಹುದು. ನಡುಗೆಯ ಒಟ್ಟು ಪ್ರಮಾಣ, ಬೈಕ್‌ನಲ್ಲಿ ಸವಾರಿ ಮಾಡಿದ ಒಟ್ಟು ಪ್ರಮಾಣ  ಎಲ್ಲವನ್ನೂ ಗೂಗಲ್ ಫಿಟ್ ಮೂಲಕ ಕಂಡುಕೊಳ್ಳಬಹುದು. ಗೂಗಲ್ ಫಿಟ್‌ನಲ್ಲಿ ಈ ಬದಲಾವಣೆಗಳು ಮುಂದಿನ ವಾರಗಳಲ್ಲಿ ಅಳವಡಿಕೆಗೆ ಬರಲಿವೆ.

ಪ್ರತಿ ದಿನ ಮುಂಜಾನೆ ಮಾಡುವ ವಾಕಿಂಗ್, ಜಾಗಿಂಗ್, ಜಿಮ್ ವ್ಯಾಯಾಮಗಳ ಟ್ರಾಕ್ ಮಾಡುವುದರ ಜತೆ, ನಿದ್ದೆಯ ಪ್ರಮಾಣವನ್ನು ಸಹ ಲೆಕ್ಕ ಹಾಕಿ, ಬಳಕೆದಾರರಿಗೆ ಒದಗಿಸುವ ಗೂಗಲ್ ಫಿಟ್‌ನ ಈ ಸೌಲಭ್ಯವು, ಆರೋಗ್ಯದ ಸಮಗ್ರ ಚಿತ್ರಣವನ್ನು ನೀಡಲು ಪ್ರಯತ್ನಿಸುವುದು ದಿಟ.

2014 ರಲ್ಲಿ ಗೂಗಲ್ ಬಿಡುಗಡೆ ಮಾಡಿದ ಆಂಡ್ರಾಯ್ಡ್ ಆಧಾರಿತ ಗೂಗಲ್ ಫಿಟ್, ಕಾಲದಿಂದ ಕಾಲಕ್ಕೆ ಹೊಸ ಹೊಸ ಫೀಚರ್‌ಗಳನ್ನು ಮೈಗೂಡಿಸಿಕೊಳ್ಳುತ್ತ, ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದು, ತನ್ನ ಪ್ರತಿಸ್ಪರ್ಧಿಗಳಿಗೆ ಸವಾಲನ್ನು ಒಡ್ಡುತ್ತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.