ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ರಾಸುಗಳಿಗೆ ಸಾಮೂಹಿಕ ಜಂತುಹುಳ ನಿವಾರಕ ಔಷಧಿಯನ್ನು ಪಲ್ಸ್ ಪೊಲಿಯೋ ಮಾದರಿಯಲ್ಲಿ ಸಂಘದ ಸದಸ್ಯರಿಗೆ ಆ.6 ರಂದು ವಿತರಿಸಲಾಯಿತು.
ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡಾಯಿಮಜಲು, ಉಪಾಧ್ಯಕ್ಷ ರಾಜೇಶ್ ಗೌಡ ಮುಂಡಾಳ, ನಿರ್ದೇಶಕ ರಾಜೇಶ್ ಮೀಜೆ ಇವರು ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಜಗದೀಶ್ ಗೌಡ, ಸಿಬ್ಬಂದಿಗಳಾದ ಚಂದ್ರಶೇಖರ ಗೌಡ ಬೈತಡ್ಕ, ಪುಷ್ಪಾ, ಚಂದ್ರಾವತಿ, ಶೀನಪ್ಪ , ಸಂಘದ ಸದಸ್ಯರು ಉಪಸ್ಥಿತರಿದ್ದರು.