Home_Page_Advt
Home_Page_Advt
Breaking News

ಆ.18ಕ್ಕೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ  ಕೃತಕ ದಂತ ಪಂಕ್ತಿ ಜೋಡಣೆಗೆ ಉಚಿತ ದಂತ ಭಾಗ್ಯ ಶಿಬಿರ

ಪುತ್ತೂರು: ಕೃತಕ ದಂತ ಪಂಕ್ತಿ ಜೋಡಣೆ ಸೇರಿದಂತೆ ದಂತಕ್ಕೆ ಸಂಬಂಧಿಸಿ ಉಚಿತ ದಂತ ಭಾಗ್ಯ ಶಿಬಿರ ಆ.18ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರುಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ನೀತಿಯ ವತಿಯಿಂದ ರೋಟರಿಕ್ಲಬ್ ಪುತ್ತೂರು. ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಮತ್ತು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಶಿಬಿರ ನಡೆಯಲಿದೆ. ತಾಲೂಕಿನ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸಂಪೂರ್ಣ ಕೃತಕ ದಂತ ಪಂಕ್ತಿ ಜೋಡಣೆಯನ್ನು ಮಾಡಲಾಗುವುದು. ಆಸಕ್ತರು ಸರಕಾರಿ ಆಸ್ಪತ್ರೆಯ ದಂತ ಆರೋಗ್ಯಾಧಿಕಾರಿ ಡಾ. ಜಯದೀಪ್ ಅವರನ್ನು ಖುದ್ದಾಗಿ ಅಥವಾ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಮುಶಾಕೀರ್ ಹುಸೇನ್ ತೆರಳಿ ತಪಾಸಣೆಗೆ ಒಳಗಾಗಿ ಹೆಸರು ನೋಂದಾಯಿಸಬೇಕಾಗಿ ಕೋರಲಾಗಿದೆ. ದೇರಳಕಟ್ಟೆ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಮಹಾವಿದ್ಯಾಲಯ ಇದರ ನುರಿತ ವೈದ್ಯರುಗಳು ಶಿಬಿರವನ್ನು ನಡೆಸಿಕೊಡುತ್ತಾರೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.