ಪುತ್ತೂರು: ವ್ಯಕ್ತಿಯೋರ್ವರು ಬೆದ್ರಾಳ ಹೊಳೆಯಲ್ಲಿ ಕೊಚ್ಚಿಹೋದ ಘಟನೆ ಜಿಡೆಕಲ್ಲು ಸಮೀಪದ ಅಂದ್ರಟ್ಟ ಎಂಬಲ್ಲಿ ಆ.10 ರಂದು ನಡೆದ ಬಗ್ಗೆ ವರದಿಯಾಗಿದೆ. ಜಿಡೆಕಲ್ಲು ರಾಗಿದಕುಮೇರು ಸಮೀಪದ ಅಂದ್ರಟ್ಟ ಎಂಬಲ್ಲಿ ಹರಿಯುತ್ತಿರುವ ಬೆದ್ರಾಳ ಹೊಳೆಯಲ್ಲಿ ಜಿಡೆಕಲ್ಲು ನಿವಾಸಿ ಜನಾರ್ದನ(30.ವ) ಎಂಬವರು ಕೊಚ್ಚಿ ಹೋಗಿದ್ದಾರೆಂದು ಮಾಹಿತಿ ಬಂದಿದೆ.
ಮೂಲತಃ ಬೆಟ್ಟಂಪಾಡಿ ನಿವಾಸಿ ಜನಾರ್ದನ ಅವರು ರಾಗಿದಕುಮೇರು ಬಳಿ ತೋಟದ ಕೆಲಸ ನಿರ್ವಹಿಸುತ್ತಿದ್ದು, ಸಂಜೆ ಹೊಳೆಯ ಬದಿಯಲ್ಲಿ ನಡೆದು ಕೊಂಡು ಹೋಗುವಾಗ ಕಾಲು ಜಾರಿ ಬಿದ್ದಿರಬಹುದು ಎಂದು ಸಂಕಿಸಲಾಗಿದ್ದು, ಅಗ್ನಿಶಾಮಕದಳ ಮತ್ತು ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ.