Home_Page_Advt
Home_Page_Advt
Home_Page_Advt
Breaking News

ಬೆದ್ರಾಳ ಹೊಳೆಯಲ್ಲಿ ಕಣ್ಮರೆಯಾದ ಜನಾರ್ದನ ಬೀರಿಗ ಹೊಳೆಯಲ್ಲಿ ಮೃತ ದೇಹ ಪತ್ತೆ

ಪುತ್ತೂರು: ಜಿಡೆಕಲ್ಲು ರಾಗಿದಕುಮೇರು ಸಮೀಪದ ಅಂದ್ರಟ್ಟ ಎಂಬಲ್ಲಿ ಬೆದ್ರಾಳ ಹೊಳೆಯಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ಕಣ್ಮರೆಯಾದ ಜನಾರ್ದನ ಅವರ ಮೃತ ದೇಹ ಚಿಕ್ಕಮುಡ್ನೂರು ಗ್ರಾಮದ ಬೀರಿಗ ಹೊಳೆ ಬದಿ ಪತ್ತೆಯಾಗಿದೆ.

ಜನಾರ್ದನ ಅವರು ಆ.10ರಂದು ಅಂದ್ರಟ್ಟದಲ್ಲಿ ಬೆದ್ರಾಳ ಹೊಳೆಯಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ಕಾಲು ಜಾರಿ ಬಿದ್ದು ಕಣ್ಮರೆಯಾದರು. ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಠಾಣಾ ಪೊಲೀಸರು ವ್ಯಾಪಕ ಶೋಧ ನಡೆಸಿದ್ದು, ರಾತ್ರಿಯಾದ್ದರಿಂದ ಶೋಧ ಕಾರ್ಯ ನಿಲ್ಲಿಸಿದ್ದರು. ಬೆಳಿಗ್ಗೆ ಅಗ್ನಿಶಾಮಕ ದಳದವರು ಘಟನಾ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ಬಳಿಕ ಹೊಳೆಯು ಕಟಾರದಲ್ಲಿ ಇನ್ನೊಂದು ಹೊಳೆಯನ್ನು ಸೇರುವ ಸ್ಥಳಕ್ಕೆ ಹೋಗಿ ಹುಡುಕಾಡುವ ಪ್ರಯತ್ನ ಮಾಡಲಾಯಿತು. ಬೀರಿಗ ಸಮೀಪ ಹೊಳೆಯ ಬದಿಯಲ್ಲಿ ಜನಾರ್ದನ ಅವರ ಮೃತ ದೇಹ ಪತ್ತೆಯಾಗಿದೆ.

 

                                                                         ಮೃತ ಜನಾರ್ದನ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.