Home_Page_Advt
Home_Page_Advt
Breaking News

ಹಾಲು ಉತ್ಪಾದಕರ ಒಕ್ಕೂಟದಿಂದ ಸಂತ್ರಸ್ತರಿಗೆ ನೆರೆ ಪರಿಹಾರ

ಪುತ್ತೂರು: ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಪ್ರವಾಹ ಭೀತಿ ಉಂಟಾಗಿರುತ್ತದೆ. ರಾಜ್ಯಾದ್ಯಂತ ಸಾಕಷ್ಟು ಹಳ್ಳಿಗಳು ಜಲಾವೃತಗೊಂಡಿದ್ದು ಅಪಾರ ಪ್ರಾಣ ಹಾನಿ ಮತ್ತು ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟಾಗಿರುತ್ತದೆ. ಸಾಕಷ್ಟು ರೈತರು ಹಾಗೂ ಹೈನುಗಾರರು ತಮ್ಮ ಜಾನುವಾರು, ಮನೆ ಮಠಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುತ್ತಾರೆ. ಆದುದರಿಂದ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಉದಾರ ದೇಣಿಗೆಯನ್ನು ಒಕ್ಕೂಟಕ್ಕೆ ನೀಡಿ ಒಕ್ಕೂಟದಿಂದ ಉದ್ಯೋಗಿಗಳ ಹಾಗೂ ಒಕ್ಕೂಟದ ವಂತಿಗೆಯನ್ನು ಕ್ರೋಢೀಕರಿಸಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸುವ ಅಭಿಪ್ರಾಯಪಡಲಾಗಿದ್ದು, ತಾವೆಲ್ಲರೂ ಸಹಕರಿಸುವಂತೆ ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.