Home_Page_Advt
Home_Page_Advt
Breaking News

ಪೋಳ್ಯ:ಮಾರುತಿ ಕಾರು-ಖಾಸಗಿ ಬಸ್ ಡಿಕ್ಕಿ ಚಾಲಕ ಬಡಗನ್ನೂರು ಮುಂಡೋಳೆಯ ಅಬ್ದುಲ್ ಹಕೀಂ ಮೃತ್ಯು

ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಖಾಸಗಿ ಬಸ್ ಹಾಗೂ ಮಾರುತಿ ಝೆನ್ ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರಿನ ಚಾಲಕ ಮೃತಪಟ್ಟಿರುವ ಘಟನೆ ಆ.12ರಂದು ಸಂಜೆ ವೇಳೆಗೆ ನಡೆದಿದೆ.

ಬಡಗನ್ನೂರು ಗ್ರಾಮ ಮುಂಡೋಳೆ ಕುಂಞಿ ಮಾಹಿಮಾರವರ ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿರುವ ಅಬ್ದುಲ್ ಹಕೀಂ(24.ವ) ಮೃತಪಟ್ಟವರು. ಮಂಗಳೂರು ಕಡೆಯಿಂದ ಬರುತ್ತಿದ್ದ ಮಾರುತಿ ಝೆನ್(ಕೆಎ ೨೧ಎಂ.ಬಿ೪೪೮೮)ಕಾರಿಗೆ ಕಬಕ ಸಮೀಪ ಪೋಳ್ಯ ತಿರುವಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಹಿಂದಿಕ್ಕುವ ಭರದಲ್ಲಿ ಖಾಸಗಿ ಧರಿತ್ರಿ ಬಸ್ (ಕೆಎ19 ಎಬಿ1494)ಕಾರಿಗೆ ಡಿಕ್ಕಿಹೊಡೆದಿದೆ. ಘಟನೆಯಿಂದ ಕಾರಿನ ಚಾಲಕ ಅಬ್ದುಲ್ ಹಕೀಂರವರಿಗೆ ತೀವ್ರ ಗಾಯಗಳಾಗಿದ್ದು ಸ್ಥಳದಲ್ಲಿ ನೆರೆದವರು ಕೂಡಲೇ ಮಹಾವೀರ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

15 ದಿನಗಳ ಹಿಂದೆ ಊರಿಗೆ ಬಂದಿದ್ದರು….
ಮೃತ ಹಕೀಂರವರು ಅಬುದಾಬಿಯಲ್ಲಿ ಉದ್ಯೋಗದಲ್ಲಿದ್ದು ಕಳೆದ 15 ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಆ.12 ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಹೋಗಿ ಹಿಂತಿರುಗುವ ವೇಳೆ ಅವರು ಅಪಘಾತ ಸಂಭವಿಸಿದೆ. ಅಲ್ಲದೆ ಮೃತ ಹಕೀಂರವರಿಗೆ ವಿವಾಹ ನಿಗದಿಯಾಗಿದ್ದು ಸೆಪ್ಟಂಬರ್ ತಿಂಗಳಿನಲ್ಲಿ ವಿವಾಹ ನಡೆಯಲಿತ್ತು ಎಂದು ಅವರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.