Home_Page_Advt
Home_Page_Advt
Breaking News

ಆರ್ಲಪದವು ಜ್ಯೋತಿ ಸ್ಟೋರ್ ಮಾಲಕ ಶ್ಯಾಮ್ ಭಟ್ ಇನ್ನಿಲ್ಲ

ನಿಡ್ಪಳ್ಳಿ: ಆರ್ಲಪದವಿನ ಪ್ರತಿಷ್ಟಿತ ಜಿನಸು ವ್ಯಾಪಾರಿ ಜ್ಯೋತಿ ಸ್ಟೋರಿನ ಮಾಲಕ ಆರ್ಲಪದವು ನಿವಾಸಿ ಜ್ಯೋತಿ ನಿಲಯದ  ಶ್ಯಾಮ್ ಭಟ್ ಇನ್ನಿಲ್ಲ.

ಕೆಲ ದಿನಗಳ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಮಂಗಳಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅ.12 ರಂದು ಮುಂಜಾನೆ  ಕೊನೆಯುಸಿರೆಳೆದರು. ಇವರು ಆರ್ಲಪದವಿನಲ್ಲಿ ಅನೇಕ ವರ್ಷಗಳಿಂದ ಜೀನಸು ವ್ಯಾಪಾರಿಯಾಗಿ ಪ್ರಸಿದ್ಧರಾಗಿದ್ದರು. ಅಲ್ಲದೆ ಹಿಂದೆ ಕೆಲವು ವರ್ಷಗಳ ಕಾಲ ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು.ನಿವೃತ್ತರಾದ ಮೇಲೆ ಎಲ್.ಐ.ಸಿ ಏಜೆಂಟ್ ಆಗಿಯೂ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಸುಶೀಲ, ಪುತ್ರ ಗಣೇಶ್, ಪುತ್ರಿಯರಾದ ಆಶಾ ಹಾಗೂ ಉಷಾರವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.