Home_Page_Advt
Home_Page_Advt
Breaking News

ಬೆಳ್ತಂಗಡಿ ನೆರೆ ಸಂತ್ರಸ್ತರಿಗೆ ಮುಖ್ಯಮಂತ್ರಿಯಿಂದ ಅಭಯದ ನುಡಿ

ಪುತ್ತೂರು: ನೆರೆ, ಪ್ರವಾಹದಿಂದ ಪೀಡಿತರಾಗಿರುವ ಬೆಳ್ತಂಗಡಿ ಭಾಗದ ಜನತೆಯನ್ನು ಭೇಟಿ ಮಾಡಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂತ್ರಸ್ತರಿಗೆ ಭಾರೀ ಪರಿಹಾರವನ್ನು ಘೋಷಿಸಿದ್ದಾರೆ. ತತ್ಕಾಲಕ್ಕೆ ಎಲ್ಲಾ 321 ಪ್ರವಾಹ ಪೀಡಿತ ಮನೆಯವರಿಗೆ ರೂ. ೧೦,೦೦೦ ಸಾಯಂಕಾಲದೊಳಗೆ ನೀಡುವಂತೆ ಸ್ಥಳದಲ್ಲಿಯೇ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವವರನ್ನು ಭೇಟಿ ಮಾಡಿದ ಸಿಎಂ ಜನತೆಯ ಅಳಲು ಕೇಳಿದರು. ಬಳಿಕ ಪರಿಹಾರ ಘೋಷಿಸಿದ ಅವರು ಪ್ರವಾಹ ಪೀಡಿತ ಎಲ್ಲಾ 321 ಮನೆಯವರಿಗೆ ತಲಾ ರೂ. ೧೦,೦೦೦, ಭಾಗಶಃ ಮನೆ ಹಾನಿಗೊಳಗಾದವರಿಗೆ ಮನೆ ರಿಪೇರಿಗೆ ರೂ. ೧ ಲಕ್ಷ, ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹೊಸದಾಗಿ ಮನೆ ಕಟ್ಟಿಕೊಳ್ಳಲು ರೂ. ೫ ಲಕ್ಷ ಹಾಗೂ ಅವರಿಗೆ ಮನೆ ಕಟ್ಟಿಕೊಳ್ಳುವವರೆಗೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಲು ಪ್ರತೀ ತಿಂಗಳು ರೂ. ೫,೦೦೦ ಬಾಡಿಗೆ ನೀಡುವುದಾಗಿ ಭರವಸೆ ನೀಡಿದರು. ಸಂಪೂರ್ಣ ಮನೆ ಕಳೆದುಕೊಂಡವರು ಬಾಡಿಗೆ ಮನೆಯಲ್ಲಿ ಅಥವಾ ಸಂಬಂಧಿಕರ ಮನೆಯಲ್ಲಿಯೂ ಇರಬಹುದು. ಆದರೆ ಅವರಿಗೆ ಹೊಸ ಮನೆ ಆಗುವವರೆಗೆ ಪ್ರತೀ ತಿಂಗಳು ರೂ. 5000 ಹಣವನ್ನು ಸರಕಾರ ಕೊಡಲಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಸುಮಾರು 321 ಕುಟುಂಬಗಳು ನೆರೆ ಸಂತ್ರಸ್ತರಾಗಿದ್ದಾರೆ. ಅದರಲ್ಲಿ ಸುಮಾರು 275 ಕುಟುಂಬ ಸಂಪೂರ್ಣ ಮನೆಯನ್ನು ಕಳೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತನ್ನ ಪ್ರವಾಸದಲ್ಲಿ ಬೆಳ್ತಂಗಡಿ ನೆರೆ ಹಾವಳಿ ವೀಕ್ಷಣೆಯ ಕಾರ್ಯಕ್ರಮ ಇರಿಸಿಕೊಂಡಿದ್ದರು.
ಜಾಗ ಇಲ್ಲದವರಿಗೆ ನಿವೇಶನ: ಈ ವೇಳೆ ಕೆಲವರು ಜಮೀನು ಕಳೆದುಕೊಂಡವರು ಅಳಲು ತೋಡಿಕೊಂಡಾಗ ಅದಕ್ಕೂ ಸ್ಪಂದಿಸಿದ ಮುಖ್ಯಮಂತ್ರಿಯವರು ತಕ್ಷಣ ಜಿಲ್ಲಾಧಿಕಾರಿಯವರಿಗೆ ಅಗತ್ಯವಿರುವ ಎಲ್ಲರಿಗೂ ನಿವೇಶನ ಕೊಡಿಸಿ ಮನೆ ಕಟ್ಟಿಸಿಕೊಡಿ' ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ನಿವೇಶನ ಕಳೆದುಕೊಂಡವರಿಗೆ ಇನ್ನು ಹೊಸದಾಗಿ 35-40 ದೊಡ್ಡದಾದ ನಿವೇಶನವನ್ನೇ ಮಂಜೂರು ಮಾಡಿಸಿ ಕೊಡಲಾಗುವುದು’ ಎಂದಿದ್ದಾರೆ.
ಕೃಷಿ ನಾಶಕ್ಕೂ ಪರಿಹಾರ: ಕೃಷಿ ಭೂಮಿ ಕಳೆದುಕೊಂಡು ಕಂಗಾಲಾಗಿದ್ದೇವೆ ಎಂಬ ಕೂಗಿಗೆ ಪ್ರತಿಕ್ರಿಯಿಸಿದ ಸಿಎಂ ಕೃಷಿ ನಾಶಕ್ಕೆ ಆಯಾ ಕೃಷಿಗನುಗುಣವಾಗಿ ಪರಿಹಾರ ಕೊಡಿಸುತ್ತೇನೆ ಎಂದರು. ಅಲ್ಲದೇ, ರಸ್ತೆ, ಸೇತುವೆ ನಿರ್ಮಾಣ ಇತ್ಯಾದಿ ಕಾರ್ಯಗಳನ್ನು ನಾವು ಮಾಡಿಸುತ್ತೇವೆ ಎಂದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.