Home_Page_Advt
Home_Page_Advt
Home_Page_Advt
Breaking News

ತೆಂಕಿಲ ಬಿರುಕು ಬಿಟ್ಟ ಗುಡ್ಡದ ನಿವಾಸಿಗಳ ಸ್ಥಳಾಂತರ, ಎಸಿ ಭೇಟಿ

*ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಸಮುದಾಯ ಭವನದಲ್ಲಿ ಆಶ್ರಯ

ಪುತ್ತೂರು: ತೆಂಕಿಲ ದರ್ಖಾಸು ಎಂಬಲ್ಲಿರುವ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕಂಪನ ಸಾಧ್ಯತೆ ಹಾಗೂ ಅಪಾಯ ವಲಯವಾಗಿರುವುದರಿಂದ ಅಲ್ಲಿನ 11 ಕುಟುಂಬಗಳನ್ನು ಸಂಜೆ ವೇಳೆಗೆ ಸ್ಥಳಾಂತರಿಸಲಾಗಿದೆ.
ನಿರ್ಮಾಣ ಹಂತದ ಮನೆಯ ಮೇಲೆ ಗುಡ್ಡ ಕುಸಿದಿರುವ ಹಾಗೂ ಬಿರುಕು ಬಿಟ್ಟಿರುವ ಗುಡ್ಡಕ್ಕೆ ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಸಂಜೆ ವೇಳೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿನ 11 ಕುಟುಂಬಗಳನ್ನು ಸ್ಥಳಾಂತರಿಸಲು ಅವರು ಸೂಚಿಸಿದ್ದಾರೆ.


ಇಂದಿರಾ ಕ್ಯಾಂಟೀನ್‌ನಲ್ಲಿ ಊಟ, ಸಮುದಾಯ ಭವನದಲ್ಲಿ ಆಶ್ರಯ:
ಸ್ಥಳಾಂತರಗೊಂಡಿರುವ ಕುಟುಂಬಗಳಿಗೆ 7 ಕುಟುಂಬಗಳ 31 ಮಂದಿ ಸದಸ್ಯರಿಗೆ ಪೌರಾಯುಕ್ತೆ ರೂಪಾ ಶೆಟ್ಟಿ ನೇತೃತ್ವದಲ್ಲಿ ಸ್ಥಳಾಂತರ ಕಾರ್ಯಗಳು ನಡೆದಿದೆ. ಗಂಗಾಧರರವರ ಕುಟುಂಬದ 4 ಮಂದಿ, ಮಾಲಿನಿಯವರ ಕಟುಂಬದ ೩ ಮಂದಿ ಹಾಗೂ ಸುರೇಶ್‌ರವರ ಕುಟುಂಬ 5 ಮಂದಿ ಸದಸ್ಯರು ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದು ಅವರಿಗೆ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಹಾಗೂ ಉಪಾಹಾರದ ಸೌಲಭ್ಯ ಕಲ್ಪಿಸಲಾಗಿದೆ. ಉಳಿದಂತೆ ಗುರುವ ಎಂಬವರ ಕುಟುಂಬದ ೮ ಮಂದಿ ಸದಸ್ಯರು ಮಿತ್ತೂರಿನಲ್ಲಿರುವ ಅವರ ಸಂಬಂಧಿಕರ ಮನೆ, ಪೂವಪ್ಪ ಎಂಬವರ ಕುಟುಂಬದ 3 ಮಂದಿ ನಿಡ್ಪಳ್ಳಿ, ಸೇಸಪ್ಪ ಗೌಡರ ಕುಟುಂಬದ 4 ಮಂದಿ ತೆಂಕಿಲ ಕಮ್ನಾರು ಹಾಗೂ ಶ್ರೀಧರ ನಾಯ್ಕ ಕುಟುಂಬದ 4 ಮಂದಿ ತೆಂಕಿಲ ಬೈಪಾಸ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು ಅವರನ್ನು ಸ್ಥಳಾಂತರಿಸುವ ಕಾರ್ಯವು ನಗರ ಸಭೆಯ ಅಧಿಕಾರಿಗಳ ಮುಖಾಂತರ ನಡೆದಿರುತ್ತದೆ. ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾಕಿರಣ್, ಇಂಜಿನಿಯರ್ ಅರುಣ್, ಗುರುಪ್ರಸಾದ್, ಶ್ರೀಧರ್, ದಿನಕರ್ ಸ್ಥಳಾಂತರಿಸುವಲ್ಲಿ ಸಹಕರಿಸಿದ್ದಾರೆ. ಅಲ್ಲದೆ ಗುತ್ತಿಗೆದಾರ ಸನತ್ ರೈಯವರು ಸಂತ್ರಸ್ಥರ ಸ್ಥಳಾಂತರಿಸುವಲ್ಲಿ ತಮ್ಮ ವಾಹನಗಳನ್ನು ನೀಡಿ ಸಹಕರಿಸಿದ್ದಾರೆ. ಸಂತ್ರಸ್ಥರಿಗೆ ಪರಿಹಾರ ಕಾರ್ಯಗಳು ಆಗುವ ತನಕ ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಪೌರಾಯುಕ್ತೆ ರೂಪಾ ಶೆಟ್ಟಿ ತಿಳಿಸಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.