Home_Page_Advt
Home_Page_Advt
Breaking News

ಇನ್ನರ್ ವ್ಹೀಲ್ ಜಿಲ್ಲಾ ಚೇರ್ ಮೆನ್ ಅನುರಾಧ ನಂದಕುಮಾರ್ ನಾಳೆ(ಆ.14) ಪುತ್ತೂರಿಗೆ


ಪುತ್ತೂರು: ಇನ್ನರ್ ವ್ಹೀಲ್ ಕ್ಲಬ್ ನ ಜಿಲ್ಲಾ ಚೇರ್‌ಮೆನ್ ಅನುರಾಧ ನಂದಕುಮಾರ್ ರವರು ಆ. 14 ರಂದು ಪುತ್ತೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 9.30 ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದು ನಂತರ ಇನ್ನರ್‌ವ್ಹೀಲ್ ಪ್ರಾಯೋಜಿತ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಪುತ್ತೂರು ಸರಕಾರಿ ಆಸ್ಪತ್ರೆಗೆ ವ್ಹೀಲ್ ಚೆಯರ್ ಹಸ್ತಾಂತರ, ಬೊಳುವಾರು ಆಂಜನೇಯ ಸರ್ಕಲ್ ಉದ್ಘಾಟನೆ, ಮಠಂತಬೆಟ್ಟು ಮತ್ತು ಕೋಡಿಂಬಾಡಿ ಅಂಗನವಾಡಿ ಕೇಂದ್ರಗಳಿಗೆ ಕಪಾಟು ಕುರ್ಚಿ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ ಕೋಡಿಂಬಾಡಿ ಕೃಷ್ಣ ಕೃಪಾ ಇಂಡಸ್ಟ್ರಿಸ್ ನ ಸಭಾಭವನದಲ್ಲಿ ನಡೆಯಲಿರುವ ‘ಇನ್ನರ್‌‌ವ್ಹೀಲ್ ಅಸೆಂಬ್ಲಿ’ ಯಲ್ಲಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.