Home_Page_Advt
Home_Page_Advt
Home_Page_Advt
Breaking News

ಆ.14ರಂದು ಪಿಲೋಮಿನಾದಲ್ಲಿ ‘ಯಕ್ಷಾಮೃತ’ ಉದ್ಘಾಟನೆ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜನಪದ ಕಲೆಗಳ ಅಧ್ಯಯನ ಕೇಂದ್ರ ‘ಯಕ್ಷಕಲಾ ಕೇಂದ್ರ’ ಇದರ ಆಶ್ರಯದಲ್ಲಿ ‘ಯಕ್ಷಾಮೃತ’ ನೃತ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ಆಗಸ್ಟ್ 14ರಂದು ಅಪರಾಹ್ನ ಘಂಟೆ 3 ಕ್ಕೆ ಕಾಲೇಜಿನ ಸ್ಪಂದನ ಸಭಾಭವನದಲ್ಲಿ ಜರಗಲಿರುವುದು.

ಪುತ್ತೂರಿನ ಖ್ಯಾತ ವೈದ್ಯರು ಹಾಗೂ ಶಾಸ್ತ್ರೀಯ ಕಲೆಗಳ ಕಲೋಪಾಸಕ ಡಾ. ಹರಿಕೃಷ್ಣ ಪಾಣಾಜೆ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಯಕ್ಷಾಮೃತದ ಸಂಪನ್ಮೂಲ ವ್ಯಕ್ತಿ ಬಾಲಕೃಷ್ಣ ಆರ್ಲಪದವು, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಂ. ವಿಜಯ್ ಲೋಬೊ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಅಧ್ಯಕ್ಷತೆ ವಹಿಸಲಿರುವರು. ಈ ತರಬೇತಿ ಕಾರ್ಯಕ್ರಮವು 50 ಘಂಟೆಗಳ ಅವಧಿಯದ್ದಾಗಿದ್ದು, ಪ್ರತಿ ಮಂಗಳವಾರ ಸಂಜೆ ಘಂಟೆ 4 ರಿಂದ 5 ರ ತನಕ ಕಾಲೇಜಿನ ಪ್ರೇರಣ ಸಭಾಂಗಣದಲ್ಲಿ ನಡೆಯಲಿರುವುದು. ಈ ತರಬೇತಿಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಯಕ್ಷಾಮೃತ ಸಂಯೋಜಕಿ ರಾಜೇಶ್ವರಿ ಎಮ್, ಸಹಾಯಕ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ (9449630175) ಅಥವಾ ಇಮೈಲ್  [email protected]  ಮೂಲಕ ಸಂಪರ್ಕಿಸಬಹುದು.

ಅಧ್ಯಯನ ಕೇಂದ್ರದ ವಿಶೇಷ ಸಮಾಜಮುಖಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶಕ ಪ್ರಶಾಂತ್ ರೈ ವಿನಂತಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.