Home_Page_Advt
Home_Page_Advt
Home_Page_Advt
Breaking News

ಪುಣಚ: ಮರಾಟಿ ಸಂಘದಿಂದ ಆಟಿದ ಕೂಟ, ಆಟೋಟ ಸ್ಪರ್ಧೆಗಳು

ಪುತ್ತೂರು: ಪುಣಚ ದೇವಿನಗರ ಶ್ರೀ ಮಹಾಮ್ಮಾಯಿ ಜೈ ಭಾರತಿ ಮರಾಟಿ ಸಂಘ ಹಾಗೂ ಮಹಿಳಾ ಮರಾಟಿ ಸಂಘ ದೇವಿನಗರ ಇವರ ಸಹಭಾಗಿತ್ವದಲ್ಲಿ ಆಟಿದ ಕೂಟ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನೆರವೇರಿದವು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನಾರಾಯಣ ನಾಯ್ಕ ಆಗ್ರಾಳರವರು ಮಾತನಾಡಿ, ಆಟಿ ತಿಂಗಳಲ್ಲಿ ನಡೆಸುವ ಆಟಿ ಕೂಟದ ಬಗ್ಗೆ ಮಾಹಿತಿ ನೀಡುತ್ತಾ ವೈಜ್ಷಾನಿಕವಾಗಿಯೂ ಆಟಿ ತಿಂಗಳಿಗೆ ಇರುವ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ವಿನೋದ ಎ,ರವರು ತುಳುನಾಡಿನ ಆಟಿ ಆಚರಣೆ ರಾಜ್ಯದಾದ್ಯಂತ ಆಚರಣೆಯಾಗಲಿ ಎಂದು ಶುಭ ಹಾರೈಸಿದರು.

ಜಿ.ಪಂ ಸದಸ್ಯೆ ಜಯಶ್ರೀ ಕೋಡಂದೂರು ಮಾತನಾಡಿ, ಆಟಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕಾದ ಅಗತ್ಯತೆ ಇದೆ ಎಂದರು.ತುಳುನಾಡಿನ ಸಂಸ್ಕಾರ, ಸಂಸ್ಕೃತಿಯೊಂದಿಗೆ ಗುರುಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಬೇಕಾದ ಜವಬ್ದಾರಿ ನಮ್ಮ ಮೇಲಿದೆ ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಮರಾಟಿ ಸಂಘದ ಅಧ್ಯಕ್ಷ ಸುಬ್ಬ ನಾಯ್ಕ ಎಂ.ಮೊಟ್ಟೆತ್ತಡ್ಕರವರು ಮತನಾಡಿ, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಮುಂದೆಯೂ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.

ಬೆಳಿಗ್ಗೆ ಮಹಿಳಾ ಮರಾಟಿ ಸಂಘದ ಅಧ್ಯಕ್ಷೆ ಪ್ರೇಮ ದೇವಿನಗರರವರುರವರು ಸ್ವಾಗತಿಸಿ, ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಭೂಮಿಕಾ ಮತ್ತು ಪೂರ್ಣಿಮಾ ಪ್ರಾರ್ಥಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಮಹಿಳಾ ಮರಾಟಿ ಸಂಘದ ನಿಕಟ ಪೂರ್ವ ಅಧ್ಯಕ್ಷೆ ನಳಿನಾಕ್ಷಿ ವಂದಿಸಿದರು. ಕವಿತಾ ಸುಬ್ಬನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿಶೇಷ ಅಭ್ಯಾಗತರಾಗಿ ಶಾಸಕ ಸಂಜೀವ ಮಠಂದೂರು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಧ್ಯಾಹ್ನ ಆಟಿ ತಿಂಗಳ ಸುಮಾರು 27 ಬಗೆಯ ವಿವಿಧ ಖಾದ್ಯಗಳೊಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.