Home_Page_Advt
Home_Page_Advt
Home_Page_Advt
Breaking News

ನೆಲ್ಯಾಡಿ ಗ್ರಾ.ಪಂ.: ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮಸಭೆ

ನೆಲ್ಯಾಡಿ: ನೆಲ್ಯಾಡಿ ಗ್ರಾ.ಪಂ.ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2019- 20ನೇ ಸಾಲಿನ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮಸಭೆ ಆ.6ರಂದು ನೆಲ್ಯಾಡಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.

ಹಟ್ಟಿ ರಚನೆ ಅನುದಾನ ಹೆಚ್ಚಳಕ್ಕೆ ಮನವಿ: ಉದ್ಯೋಗ ಖಾತ್ರಿ ಯೋಜನೆಯಡಿ ಹಟ್ಟಿ ರಚನೆಗೆ ಎಸ್‌ಸಿ,ಎಸ್‌ಟಿ ಫಲಾನುಭವಿಗಳಿಗೆ 43 ಸಾವಿರ ರೂ., ಹಾಗೂ ಸಾಮಾನ್ಯ ವರ್ಗಕ್ಕೆ 19 ಸಾವಿರ ರೂ.ಅನುದಾನ ನೀಡಲಾಗುತ್ತಿದೆ. ಆದರೆ ಹಟ್ಟಿ ನಿರ್ಮಾಣಕ್ಕೆ ಕನಿಷ್ಠ 1.50 ಲಕ್ಷ ರೂ. ಆದರೂ ಬೇಕಾಗುತ್ತದೆ. ಆದ್ದರಿಂದ ಹಟ್ಟಿ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ 80 ಸಾವಿರ ರೂ. ಅನುದಾನ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ವಸತಿ ಯೋಜನೆ ಅನುದಾನವೂ ಏರಿಕೆಗೆ ಆಗ್ರಹ:
ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿ ಉದ್ಯೋಗ ಖಾತ್ರಿ ಯೋಜನೆಯಡಿ 24,900 ರೂ.ನೀಡಲಾಗುತ್ತಿದೆ. ಈ ಮೊತ್ತವನ್ನು ಕನಿಷ್ಠ 75 ಸಾವಿರ ರೂ.ಗೆ ಏರಿಕೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಶಾಲಾ ಆವರಣಗೋಡೆ, ಶಾಲಾ ಕೈತೋಟಕ್ಕೆ ಸಂಬಂಧಿಸಿದ ಸಾಮಾಗ್ರಿ ಬಿಲ್ಲು ಆಯಾವರ್ಷವೇ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಪಡುಬೆಟ್ಟು ಶಾಲಾ ಮುಖ್ಯಶಿಕ್ಷಕಿ ಅನ್ನಮ್ಮರವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಜನಾಧಿಕಾರಿ ಚಂದ್ರಶೇಖರ್‌ರವರು ಸಾಮಾಗ್ರಿ ಮೊತ್ತ ಸರಕಾರದಿಂದ 6 ತಿಂಗಳು, 1 ವರ್ಷಕ್ಕೊಮ್ಮೆ ಬಿಡುಗಡೆಯಾಗುತ್ತದೆ. ಹಣ ಬಿಡುಗಡೆಯಾದ ತಕ್ಷಣ ಅಧ್ಯಕ್ಷರು, ಪಿಡಿಒ ತಂಬು ನೀಡಿದಲ್ಲಿ ಖಾತೆಗೆ ಜಮೆಯಾಗುತ್ತದೆ ಎಂದರು.

ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಇಲಾಖೆಯ ನೆಲ್ಯಾಡಿ ವಲಯ ಮೇಲ್ವಿಚಾರಕಿ ಉಮಾವತಿಯವರು ಮಾತನಾಡಿ, ಬಡತನ ನಿರ್ಮೂಲನೆ ಹಾಗೂ ಅಭಿವೃದ್ಧಿಗಾಗಿಯೇ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದಿದೆ. ಇದರಿಂದ ಬಹಳಷ್ಟು ಉಪಯೋಗವಿದ್ದು ಮಹಿಳೆಯರಲ್ಲೂ ದುಡಿಯುವ ಮನೋಭಾವ ಬೆಳೆದಿದೆ. ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಲಭ್ಯವಿದೆ. ಅದರಂತೆ ಆವರಣ ಗೋಡೆಗೂ ಅನುದಾನ ಕೊಡಬೇಕೆಂದು ಹೇಳಿದರು. ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಜೀವನ ಖಾತ್ರಿ ಯೋಜನೆಯಾಗಿದೆ. ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಸಕಾಲದಲ್ಲಿ ನೀಡಿ ಗ್ರಾ.ಪಂ.ನೊಂದಿಗೆ ಸಹಕರಿಸಬೇಕು. ಪಿಡಿಒ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ಪ್ರಯತ್ನದಿಂದ ಗ್ರಾಮದಲ್ಲಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಪಿಡಿಒ ಮಂಜುಳ ಎನ್.,ರವರು ಸಂದರ್ಭೋಚಿತವಾಗಿ ಮಾತನಾಡಿದರು. ಯೋಜನೆಯ ತಾಲೂಕು ಯೋಜನಾಧಿಕಾರಿ ಚಂದ್ರಶೇಖರ್‌ರವರು ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶಗಳು ಹಾಗೂ ಯೋಜನೆಯಡಿ ನಿರ್ವಹಿಸಬಹುದಾದ ಕಾಮಗಾರಿಗಳ ವಿವರ ನೀಡಿದರು. ಇಂಜಿನಿಯರ್ ವಿನೋದ್‌ರವರು ನೀರಿಂಗಿಸುವಿಕೆ ಕುರಿತಂತೆ ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಉಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರುಗಳಾದ ವಿನೋದರ, ಶಬ್ಬೀರ್ ಸಾಹೇಬ್, ಅಬ್ದುಲ್ ಹಮೀದ್, ಲೈಲಾತೋಮಸ್, ತೀರ್ಥೇಶ್ವರ ಯು., ಉಷಾ ಒ.ಕೆ., ಹಾಗೂ ಫಲಾನುಭವಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದೇವರಾಜ್ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಸಿಬ್ಬಂದಿಗಳಾದ ಸೋಮಶೇಖರ್, ಗಿರೀಶ್, ಭವ್ಯ,ಲಲಿತಾ, ಲೀಲಾವತಿ, ಅಬ್ದುಲ್‌ರಹಿಮಾನ್‌ರವರು ಸಹಕರಿಸಿದರು.

23.10 ಲಕ್ಷ ರೂ.ಖರ್ಚು
2018ರ ಅ.1ರಿಂದ 2019ರ ಮಾ.31ರ ತನಕದ ಪ್ರಥಮ ಹಂತದಲ್ಲಿ ನೆಲ್ಯಾಡಿ ಗ್ರಾ.ಪಂ.ನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 108 ಕಾಮಗಾರಿಗಳು ನಡೆದಿದ್ದು 32,10,313 ರೂ.ಖರ್ಚು ಮಾಡಲಾಗಿದೆ. ಈ ಪೈಕಿ 14,69,100 ರೂ.ಕೂಲಿ ಹಾಗೂ 8,41,212 ರೂ. ಸಾಮಾಗ್ರಿ ಮೊತ್ತ ಪಾವತಿಯಾಗಿದೆ. 221ಕುಟುಂಬಗಳ 406 ಸದಸ್ಯರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದು 5900 ಮಾನವ ದಿನ ಸೃಜನೆಯಾಗಿದೆ ಎಂದು ಯೋಜನಾಧಿಕಾರಿ ಚಂದ್ರಶೇಖರ್‌ರವರು ತಿಳಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.