Home_Page_Advt
Home_Page_Advt
Breaking News

ಮರುವಂತಿಲ ಕಮಲ ನಿಧನ

ಪುತ್ತೂರು: ಪೆರಾಬೆ ಗ್ರಾಮದ ಮರುವಂತಿಲ ದಿ| ಬಾಬು ರವರ ಪತ್ನಿ ಕಮಲ (55.) ಅನಾರೋಗ್ಯದಿಂದ ಬಳಲುತ್ತಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.12 ರಂದು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರ ತಮ್ಮ ಸುಳ್ಯ ಮಂಡಲ ಬಿಜೆಪಿ ಎಸ್.ಸಿ ಮೊರ್ಚ ಸದಸ್ಯ ಬಾಬು, ಸಹೋದರಿಯರಾದ ಗೀರಿಜ, ಮೀನಾಕ್ಷಿ, ಗುಲಾಬಿ, ಜಯಂತಿ, ಮಕ್ಕಳಾದ ಪೆರಾಬೆ ಗ್ರಾಮ ಪಂಚಾಯತ್ ಸದಸ್ಯೆ ವನಜ, ಭವಾನಿ, ಯಮುನ, ಅಳಿಯಂದಿರಾದ ಕೇಪು, ಸುಂದರ ರನ್ನು ಅಗಲಿದ್ದಾರೆ. ಕೇಂದ್ರ ಸರಕಾರದ ಆಯುಸ್ಮಾನ್ ಯೋಜನೆಯಡಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಲಭಿಸಿದ್ದು ಇದರಿಂದ ನಮಗೆ ಬಹಳಷ್ಟು ಪ್ರಯೋಜನವಾಯಿತು. ಮೃತ ದೇಹವನ್ನು ಮಂಗಳೂರಿನಿಂದ ಮನೆಗೆ ತರುವಲ್ಲಿ ಹಿಂದೂ ಜಾಗರಣ ವೇದಿಕೆ ಮಂಗಳೂರಿನವರು ಉಚಿತ ಸೇವೆ ನೀಡಿದರು ಎಂದು ಮೃತರ ತಮ್ಮ ಬಾಬು ಮರುವಂತಿಲ ರವರು ತಿಳಿಸಿದ್ದಾರೆ.

ಮೃತರ ಮನೆಗೆ ಸುಳ್ಯ ಮಂಡಲ ಬಿಜೆಪಿ ಸದಸ್ಯ ಮಹಾಬಲ ಪಡುಬೆಟ್ಟು, ಪ್ರಕಾಶ್ ಶೆಟ್ಟಿ ಮರುವಂತಿಲ, ದಯಾನಂದ ಪೂಜಾರಿ ಆಲಂಕಾರು ನೆಕ್ಕಿಲಾಡಿ ಸೇರಿದಂತೆ ಹಲವು ಗಣ್ಯರು ಬಂದು ಸಂತಾಪ ಸೂಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.