Home_Page_Advt
Home_Page_Advt
Home_Page_Advt
Breaking News

ಪುಣ್ಚತ್ತಾರು: ಪರಿಸರ ಸ್ವಚ್ಚತಾ ಆಂದೋಲನ, ಗಿಡ ನಾಟಿಗೆ ಚಾಲನೆ

ಕಾಣಿಯೂರು : ಪುಣ್ಚತ್ತಾರು ಶ್ರೀ ಹರಿ ಸ್ಪೋಟ್ಸ್ ಕ್ಲಬ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪುಣ್ಚತ್ತಾರು, ಪುಣ್ಚತ್ತಾರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಸಹಯೋಗದಲ್ಲಿ ನಡೆದ ಪರಿಸರ ಸ್ವಚ್ಚತಾ ಆಂದೋಲನ ಹಾಗೂ ಗಿಡ ನಾಟಿ ಕಾರ್ಯಕ್ರಮಕ್ಕೆ ಬೊಬ್ಬೆಕೇರಿ ಶಾಲೆಯಲ್ಲಿ ಅಲ್ಲಿನ ಶಿಕ್ಷಕ ಜನಾರ್ಧನ ಅವರ ಉಪಸ್ಥಿತಿಯಲ್ಲಿ ತೆಂಗಿನಗಿಡ ನೆಡುವ ಮೂಲಕ ಪುಣ್ಚತ್ತಾರು ಶ್ರೀ ಹರಿ ಸ್ಪೋಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ಉತ್ತಮ್ ಕುಮಾರ್ ಮೇಲಾಂಟ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭ ಪುಣ್ಚತ್ತಾರು ಶ್ರೀ ಹರಿ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ಪೈಕ ಕಟೀಲ್, ಬೊಬ್ಬೆಕೇರಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಯರಾಮ ನಾವೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಪ್ರವೀಣ್ ರೈ ಕುಮೇರು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಮಾಳ, ಶ್ರೀ ಹರಿ ಸ್ಪೋಟ್ಸ್ ಕ್ಲಬ್‌ನ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಶ್ರೀ ಗ್ರಾಮ ದೈವಸ್ಥಾನ ಪೈಕ ಕರಿಮಜಲು ಇದರ ಕಾರ್ಯದರ್ಶಿ ಹರೀಶ್ ಪೈಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪುಣ್ಚತ್ತಾರು ಶ್ರೀ ಹರಿ ಸ್ಪೋಟ್ಸ್ ಕ್ಲಬ್, ಪುಣ್ಚತ್ತಾರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೊಬ್ಬೇಕೇರಿ ಶಾಲಾ ಆವರಣದಲ್ಲಿ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪರಿಸರದಲ್ಲಿ ,ಪುಣ್ಚತ್ತಾರು ಶ್ರೀ ಹರಿಭಜನಾ ಮಂದಿರದ ವಠಾರದಲ್ಲಿ ಸ್ವಚ್ಚತೆ ಹಾಗೂ ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು. ಪುಣ್ಚತ್ತಾರು ಪೇಟೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಕೊಂಬೆಗಳನ್ನು ತೆರವು ಮಾಡಲಾಯಿತು. ನಂತರ ಗಿಡ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಒಟ್ಟು 400 ಗಿಡಗಳನ್ನು ಬಳಸಿಕೊಳ್ಳಲಾಯಿತು. ದಿನೇಶ್ ಮಾಳ ಸ್ವಾಗತಿಸಿದರು. ದಿನೇಶ್ ಪೈಕ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.