ಪುತ್ತೂರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ಪೆರಾಬೆ-ಕುಂತೂರು ಇದರ ಆಶ್ರಯದಲ್ಲಿ ‘ಬಿರುವೆರ್ನ ಆಟಿಕೂಟ’ ಆ.12 ರಂದು ಆಲಂಕಾರು ದುರ್ಗಾಂಬಾ ಪ.ಪೂ.ವಿದ್ಯಾಲಯದಲ್ಲಿ ನಡೆಯಿತು.
ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರವೀಣ್ಕುಮಾರ್ ಕಡೆಂಜಿಗುತ್ತು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲ್ರವರು ಚೆನ್ನೆಮನೆ ಆಟ ಆಡುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಕುಂಜ ಶ್ರೀ ರಾಮಕುಂಜೇಶ್ವರ ಆ.ಮಾ.ಶಾಲೆಯ ಶಿಕ್ಷಕಿ ಸರಿತಜನಾರ್ದನರವರು ಆಟಿ ನುಡಿಕಟ್ಟು, ತುಳು ಸಂಸ್ಕೃತಿಯ ಬಗ್ಗೆ ತಿಳಿಸಿದರು. ಪುತ್ತೂರು ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ವಿನಯವಸಂತ್ ಬುಳೇರಿಕಟ್ಟೆ, ಯುವ ವಾಹಿನಿ ಕಡಬ ಘಟಕದ ಅಧ್ಯಕ್ಷ ಬಿ.ಎಲ್.ಜನಾರ್ದನ,ಸುಬ್ರಹ್ಮಣ್ಯ ಅನುಗ್ರಹ ಕನ್ಸ್ಟ್ರಕ್ಷನ್ ಮಾಲಕ, ಆರ್ಯಭಟ ಪ್ರಶಸ್ತಿ ಪುರಸ್ಕೃತ ರವಿ ಕಕ್ಕೆಪದವು, ಬಿಲ್ಲವ ಸಂಘದ ಆಲಂಕಾರು ವಲಯ ಸಂಚಾಲಕ ಸದಾನಂದ ಕುಮಾರ್ ಮಡ್ಯೋಟ್ಟು, ಆಲಂಕಾರು ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷ ರವಿ ಮಾಯಿಲ್ಗ, ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ, ಕೊಲ-ರಾಮಕುಂಜ ಬಿಲ್ಲವ ಸಂಘದ ಅಧ್ಯಕ್ಷ ಅಶೋಕ್ ಕೊಂಡ್ಯಾಡಿ, ಹಳೆನೇರೆಂಕಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಅನಿಲ್ ಪಾತ್ರಮಾಡಿ, ಪೆರಾಬೆ-ಕುಂತೂರು ಮಹಿಳಾ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಹರಿಣಾಕ್ಷೀ ಊರುಸಾಗು ಶುಭಹಾರೈಸಿದರು.
ಪೆರಾಬೆ-ಕುಂತೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಉದಯ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಬಾಲಕೃಷ್ಣ ಪೂಜಾರಿ ಪೆರಾಬೆ ಸಾರಕೆರೆ ಸ್ವಾಗತಿಸಿದರು. ಅನಿಲ್ ಕುಮಾರ್ ಉರುಸಾಗ್ ವಂದಿಸಿದರು. ಕಾರ್ಯದರ್ಶಿ ವಿಜಯ ಕೆದಿಲ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾಶ್ರೀ ಹಾಗೂ ದೀಪಾಶ್ರೀ ಪ್ರಾರ್ಥಿಸಿದರು. ಆಟಿ ತಿಂಗಳ ವಿಶೇಷ ಖಾದ್ಯಗಳನ್ನು ತಯಾರಿಸಿ ತಂದ ಮಹಿಳೆಯರಿಗೆ ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು.