Home_Page_Advt
Home_Page_Advt
Home_Page_Advt
Breaking News

ಪುತ್ತೂರು ಎ.ಸಿ.ಯಾಗಿದ್ದ ಹರ್ಷಗುಪ್ತ ಬೆಂಗಳೂರು ರೀಜನಲ್ ಕಮಿಷನರ್

ಪುತ್ತೂರು: ಈ ಹಿಂದೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ಹರ್ಷಗುಪ್ತ ಅವರನ್ನು ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನೇಮಕಗೊಳಿಸಿ ಸರಕಾರ ಆದೇಶಿಸಿದೆ.

1997ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಹರ್ಷಗುಪ್ತ ಅವರು ಪುತ್ತೂರು ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದರು.ಇದೇ ಸಂದರ್ಭದಲ್ಲಿ ಅವರು ಎಪಿಎಂಸಿ ಆಡಳಿತಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ, ತೆರಿಗೆ ಪಾವತಿಸದೆ ಅಡಿಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಹಲವು ಪ್ರಕರಣಗಳನ್ನು ಪತ್ತೆ ಮಾಡಿ ಸುದ್ದಿಯಾಗಿದ್ದರು.ಆರಂಭದಲ್ಲಿ ದೆಹಲಿ ಉಪವಿಭಾಗದಲ್ಲಿ ಭೂಕಂದಾಯ ನಿರ್ವಾಹಣೆ ವಿಭಾಗದ ಸಹಾಯಕ ಆಯುಕ್ತರಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು.ಪುತ್ತೂರಿನಿಂದ ಭಡ್ತಿಹೊಂದಿ ವರ್ಗಾವಣೆ ಹೊಂದಿದ ಬಳಿಕ ಗುಪ್ತ ಅವರು ಬಳ್ಳಾರಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಬೀದರ್, ಶಿವಮೊಗ್ಗ, ಚಾಮರಾಜನಗರ, ಮಂಗಳೂರು, ಮೈಸೂರು,ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿ,ಬಿಬಿಎಂಪಿ ಜಂಟಿ ಕಾರ್ಯದರ್ಶಿಯಾಗಿ, ಕಾರ್ಮಿಕ ಇಲಾಖಾ ಆಯುಕ್ತರಾಗಿ, ಕೆಎಂಆಫ್ ಆಡಳಿತ ನಿರ್ದೇಶಕರಾಗಿ, ಕುಡ್ಸೆಂಪ್ ಎಂಡಿಯಾಗಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿಯಾಗಿ,ಕಲಬುರ್ಗಿ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿ ದಕ್ಷ ಅಧಿಕಾರಿಯಾಗಿ ಹೆಸರುಗಳಿಸಿದ್ದರು.ಪ್ರಸ್ತುತ ವಸತಿ ಇಲಾಖಾ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಷ ಗುಪ್ತ ಅವರನ್ನು ಇದೀಗ ಬೆಂಗಳೂರು ವಿಭಾಗದ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನೇಮಕಗೊಳಿಸಿ ವರ್ಗಾವಣೆಗೊಳಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.