Home_Page_Advt
Home_Page_Advt
Breaking News

ಕಾಣಿಯೂರು ಅಂಚೆ ಪಾಲಕ ಅಶ್ವತ್ ರವರಿಗೆ ಬೀಳ್ಕೊಡುಗೆ

ಪುತ್ತೂರು : ಕಾಣಿಯೂರು ಉಪ ಅಂಚೆ ಕಛೇರಿಯಲ್ಲಿ ಅಂಚೆ ಪಾಲಕರಾಗಿರುವ ಅಶ್ವತ್‌ರವರು ಪುತ್ತೂರು ಅಂಚೆ ಕಛೇರಿಗೆ ವರ್ಗಾವಣೆಗೊಂಡಿದ್ದು, ಅವರಿಗೆ ಬಿಳ್ಕೋಡುವ ಕಾರ್ಯಕ್ರಮವು ಆ.10 ರಂದು ಕಾಣಿಯೂರು ಹಾಗೂ ಬ್ರಾಂಚ್ ಆಫೀಸಿನ ಸಹಕಾರದೊಂದಿಗೆ ಕಾಣಿಯೂರು ಉಪ ಅಂಚೆ ಕಛೇರಿಯಲ್ಲಿ ನಡೆಯಿತು. ಕಡಬದಿಂದ ವರ್ಗಾವಣೆಗೊಂಡು ಕಾಣಿಯೂರು ಅಂಚೆ ಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರುಳ್ಯ ಬ್ರಾಂಚ್‌ನ ಪೋಸ್ಟ್ ಮಾಸ್ಟರ್ ಬಾಲಕೃಷ್ಣ ಗೌಡ ಎ ಇವರು ಅಶ್ವತ್‌ರವರಿಗೆ ಶಾಲು ಹೊದಿಸಿ ಫಲ ಪುಷ್ಪದೊಂದಿಗೆ ಕಿರುಕಾಣಿಕೆಯನ್ನು ನೀಡಿ ಗೌರವಿಸಿ ಶುಭಹಾರೈಸಿದರು.

ಅಶ್ವತ್‌ರವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಬ್ರಾಂಚ್ ಆಫೀಸಿನ ಯಶೋಧ, ನಾರಾಯಣ ಗೌಡ, ಯೋಗಿಶ, ಜಯ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸಹಕಾರ ನೀಡಿದ ಅಂಚೆಪಾಲಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನೂತನ ಅಂಚೆ ಪಾಲಕ ಅಣ್ಣುರವರು ಮಾತನಾಡಿ ಬ್ರಾಂಚ್ ಆಫೀಸಿನವರು ಎಲ್ಲರೂ ಸಹಕಾರ ನೀಡಬೇಕು. ನಾವೆಲ್ಲರೂ ಯಾವುದೇ ತಾರತಮ್ಯವಿಲ್ಲದೆ ಒಗ್ಗಟ್ಟಿನಿಂದ ಕೆಲಸವನ್ನು ಮಾಡೋಣ ಎಂದು ಹೇಳಿ ವರ್ಗಾವಣೆಗೊಂಡ ಅಶ್ವತ್‌ರಿಗೆ ಶಭ ಹಾರೈಸಿದರು.

ಕಾಣಿಯೂರಿನ ಪೋಸ್ಟ್ ಮ್ಯಾನ್ ಉಮೇಶ್ ಪ್ರಾಸ್ತಾವಿಕದೊಂದಿಗೆ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯ ಕಾಣಿಯೂರು ವಂದಿಸಿದರು, ಈ ಸಂದರ್ಭದಲ್ಲಿ ಬ್ರಾಂಚ್ ಆಫೀಸಿನ ಬಾಲಕೃಷ್ಣ ಗೌಡ, ವೆಂಕಪ್ಪ ಗೌಡ ಮುರುಳ್ಯ, ಯಶೋಧ, ರಮೇಶ್ ಬೊಬ್ಬೆಕೇರಿ, ನಾರಾಯಣ ಗೌಡ, ತಾರಿಕಾ ಚಾರ್ವಾಕ, ಯೋಗಿಶ್ ದೋಳ್ಪಾಡಿ ಹಾಗೂ ಕಾಣಿಯೂರು ಶಿವ ಸ್ಟುಡಿಯೋ ಮಾಲಕರಾದ ವಸಂತ ಕೋಡಂದೂರು, ಬೆಳಂದೂರು ಗ್ರಾ.ಪಂ ಸದಸ್ಯ ಜಯಂತ ಅಬೀರ, ಕರಿಯಪ್ಪ, ಮೋಹಿನಿ ಮತ್ತಿರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.