Home_Page_Advt
Home_Page_Advt
Breaking News

ನವ್ಯ ಕಾವ್ಯ ಜಾಲತಾಣದ ಕಾವ್ಯ ಲಹರಿ ಕವನ ಸ್ಪರ್ಧೆಗೆ ಆಹ್ವಾನ


ಪುತ್ತೂರು: ನವ್ಯ ಕಾವ್ಯ ಕರ್ನಾಟಕದ ಮೊತ್ತ ಮೊದಲ ಕನ್ನಡ ಕವಿತೆಗಳ ಪ್ರಕಟಣೆ ಮತ್ತು ಪ್ರಸಾರಕ್ಕಾಗಿಯೇ ನಿರ್ಮಿತವಾದ ಅಂತರ್ಜಾಲ ತಾಣವಾಗಿದ್ದು ಉದಯೋನ್ಮುಖ ಕನ್ನಡ ಕವಿ-ಕವಯಿತ್ರಿಗಳ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಕಾವ್ಯಾಸಕ್ತರ ಮನೋರಂಜನೆಗೆ ತಕ್ಕುದಾದ ವೇದಿಕೆಯಾಗಿದೆ. ಈ ಜಾಲತಾಣದಲ್ಲಿ ನವರಸಯುಕ್ತ ಕವನಗಳ ಭರಪೂರ ಆನಂದವನ್ನು ಪಡೆಯಬಹುದು. ಅಲ್ಲದೆ ನವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತಾಗಿ ಆಸಕ್ತಿಯನ್ನು ಚಿಗುರಿಸಿ, ಯುವಕ-ಯುವತಿಯರನ್ನು ಕನ್ನಡದಲ್ಲಿ ಸೃಜನಶೀಲ ಕವನಗಳನ್ನು ಬರೆಯಲು ಪ್ರೇರೇಪಿಸಿ, ತನ್ಮೂಲಕ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಉಳಿವು-ಬೆಳವಿಗೆ ಅಳಿಲ ಸೇವೆಯನ್ನು ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆ.

ನವ್ಯ ಕಾವ್ಯ ಜಾಲತಾಣವು ಪ್ರತೀವರ್ಷದಂತೆ ಕಾವ್ಯ ಲಹರಿ 2019 ಕವನ ಸ್ಪರ್ಧೆಯನ್ನು ಆಯೋಜಿಸಿದೆ. ಆಸಕ್ತರು ನೊಂದಣಿಯನ್ನು ಮಾಡಲು https://imjo.in/3P6bUe ಕೊಂಡಿಯನ್ನು ಉಪಯೋಗಿಸಿ. ಹೆಚ್ಚಿನ ವಿವರಗಗಳಿಗೆ +919164561755, ಅನೀಶ್ ಪಿ.ವಿ. ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.