Home_Page_Advt
Home_Page_Advt
Home_Page_Advt
Breaking News

ನೆಲ್ಯಾಡಿ-ದೋಂತಿಲ: ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ, ಶ್ರೀರಾಮ ಶಿಶು ಮಂದಿರ ನೆಲ್ಯಾಡಿ, ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ದೋಂತಿಲ, ಚಾಮುಂಡೇಶ್ವರಿ ಭಜನಾ ಮಂಡಳಿ, ದೋಂತಿಲ ಮತ್ತು ಮಾತೃ ಮಂಡಳಿ ನೆಲ್ಯಾಡಿ-ಕೌಕ್ರಾಡಿ ಇದರ ಆಶ್ರಯದಲ್ಲಿ 11ನೇ ವರ್ಷದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ವೃತ(ಪೂಜೆ) ಮತ್ತು ಧಾರ್ಮಿಕ ಸಭೆ ಆ.9 ರಂದು ನೆಲ್ಯಾಡಿ ಶ್ರೀ ಕ್ಷೇತ್ರ ದೋಂತಿಲ ಸುಬ್ರಹ್ಮಣ್ಯೇಶ್ವರ ದೇವರ ಸನ್ನಿಧಿಯಲ್ಲಿ ನಡೆಯಿತು.ಬೆಳಿಗ್ಗೆ ವರಮಹಾಲಕ್ಷ್ಮೀ ವೃತ(ಪೂಜೆ) ನಡೆಯಿತು. ಬಳಿಕ ಧಾರ್ಮಿಕ ಸಭೆ ನಡೆಯಿತು. ದೋಂತಿಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಮೊಕ್ತೇಸರ ಸುಬ್ರಹ್ಮಣ್ಯ ಬಾಳ್ತಿಲ್ಲಾಯರವರು ಅಧ್ಯಕ್ಷತೆ ವಹಿಸಿದ್ದರು.

ಧಾರ್ಮಿಕ ಉಪನ್ಯಾಸ ನೀಡಿದ ಉಜಿರೆ ಎಸ್‌ಡಿಎಂ ಪ.ಪೂ.ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ ಇಚ್ಲಂಪಾಡಿಯವರು, ಮಹಿಳೆಯರು ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಸಾಮೂಹಿಕವಾಗಿ ಆಚರಿಸುವುದರಿಂದ ಸಮಾನತೆ ಮತ್ತು ಸಾಮರಸ್ಯದ ಜೀವನ ಪದ್ದತಿ ಅಳವಡಿಸಲು ಸಹಕಾರಿಯಾಗುತ್ತದೆ. ಇದರಿಂದ ಮಹಿಳೆಯರಲ್ಲಿ ಜಾಗೃತಿಯೂ ಆಗಲಿದೆ ಎಂದರು. ನೆಲ್ಯಾಡಿ ಶ್ರೀ ರಾಮ ವಿದ್ಯಾಲಯ ಗೌರವಾಧ್ಯಕ್ಷ ಜಯಪ್ರಕಾಶ್ ನೆಕ್ರಾಜೆ, ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ಕಾರ್‍ಯದರ್ಶಿ ಬಾಲಕೃಷ್ಣ ಬಾಣಜಾಲು, ಶಿಶುಮಂದಿರದ ಮಾತಾಜಿ ಸುಮಲತಾ, ವಿಶಾಲ ಕೋಲ್ಯೋಟ್ಟು ಸ್ಮರಣಿಕೆ ನೀಡಿದರು.

ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ ಸುಪ್ರೀತಾ ರವಿಚಂದ್ರ ಹೊಸವಕ್ಲು ಸ್ವಾಗತಿಸಿದರು. ಸುಮನ ದೋಂತಿಲ ವಂದಿಸಿದರು. ಅಶ್ವಿತಾ ಮಾತಾಜಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.