Home_Page_Advt
Home_Page_Advt
Home_Page_Advt
Breaking News

ಪೋಳ್ಯ: ಬಸ್ಸಿಗೆ ಕಲ್ಲು ತೂರಾಟ ಪ್ರಕರಣ ಐವರು ಆರೋಪಿಗಳ ಬಂಧನ


ಪುತ್ತೂರು: ಕಬಕ ಸಮೀಪದ ಪೋಳ್ಯದಲ್ಲಿ ಖಾಸಗಿ ಬಸ್ಸು ಮತ್ತು ಕಾರೊಂದರ ಮಧ್ಯೆ ಅಪಘಾತ ಸಂಭವಿಸಿ ಕಾರು ಚಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿ ಬಸ್ಸಿಗೆ ಕಲ್ಲುತೂರಾಟ ನಡೆಸಿ ಹಾನಿ ಉಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆ.12ರಂದು ಪೋಳ್ಯದಲ್ಲಿ ಕಾರು ಮತ್ತು ಬಸ್ಸಿನ ಮಧ್ಯೆ ಅಪಘಾತ ಸಂಭವಿಸಿ ಕಾರು ಚಾಲಕ ಬಡಗನ್ನೂರು ಮುಂಡೋಳೆ ಅಬ್ದುಲ್ ಹಕೀಂ ಎಂಬವರು ಮೃತಪಟ್ಟಿದ್ದರು. ಖಾಸಗಿ ಬಸ್ಸಿನ ಚಾಲಕ ಕೆಎಸ್‌ಆರ್‌ಟಿಸಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಿ, ಸ್ಥಳದಲ್ಲಿದ್ದ ಕೆಲವರು ಬಸ್ಸಿಗೆ ಕಲ್ಲು ತೂರಾಟ ನಡೆಸಿ ಹಾನಿ ಉಂಟು ಮಾಡಿದ್ದರು.

ಈ ಕುರಿತು ಬಸ್ಸಿನ ಮಾಲಕ ಸುದೇಶ್ಚಂದ್ರ ರೈ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ಈ ಸಂಬಂಧ ಕಬಕ ನಿವಾಸಿಗಳಾದ ಸಿದ್ದೀಕ್(33ವ.),ಕೆ.ಹಂಝ(38ವ.),ಅಬೀಬ್ ಫೈಸಲ್(29ವ.),ಅಬ್ದುಲ್ ಸಮೀರ್(30ವ.)ಮತ್ತು ಕೊಡಿಪ್ಪಾಡಿ ನಿವಾಸಿ ಇಸ್ಮಾಯಿಲ್(23ವ.)ಎಂಬವರನ್ನು ಬಂಧಿಸಲಾಗಿದೆ.ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.