Home_Page_Advt
Home_Page_Advt
Breaking News

ಆ.14: ಕುದ್ಮಾರಿನಲ್ಲಿ ಬೃಹತ್ ಪಂಜಿನ ಮೆರವಣಿಗೆ, ಅಖಂಡ ಭಾರತ ಸಂಕಲ್ಪ ದಿನಾಚರಣೆ

ಪುತ್ತುರು: ವಿಶ್ವಹಿಂದೂ ಪರಿಷತ್, ಬಜರಂಗದಳ ಬೆಳಂದೂರು ವಲಯ ಇದರ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ಮತ್ತು ಅಖಂಡ ಭಾರತ ಸಂಕಲ್ಪ ದಿನಾಚರಣೆಯು ಆ.14 ರಂದು ನಡೆಯಲಿದೆ.

ಕಾಣಿಯೂರಿನಲ್ಲಿ ಸಂಜೆ ಗಂಟೆ 6ಕ್ಕೆ ಆರ್‌ಎಸ್‌ಎಸ್ ಹಿರಿಯ ಕಾರ್ಯಕರ್ತ ಜಿನ್ನಪ್ಪ ಗೌಡ ಕಳುವಾಜೆಯವರು ಮೆರವಣಿಗೆಗೆ ಚಾಲನೆ ನೀಡಲಿದ್ದು, ಕಾಣಿಯೂರು ಪೇಟೆಯಿಂದ ಹೊರಟು ಬೆಳಂದೂರು ರಾಜ್ಯ ರಸ್ತೆಯಲ್ಲಿ ಸುಮಾರು 6 ಕಿ.ಮೀ ದೂರ ಸಾಗಿ ಕುದ್ಮಾರಿನಲ್ಲಿ ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಸಮಾಪನೆಗೊಳ್ಳಲ್ಲಿದೆ.

ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಸೀತಾರಾಮ ಆತಾಜೆ ಅಧ್ಯಕ್ಷತೆ ವಹಿಸಲಿದ್ದು, ಬೆಳ್ತಂಗಡಿ ಪ್ರಖಂಡ ವಿಶ್ವಹಿಂದೂ ಪರಿಷದ್‌ನ ಅಧ್ಯಕ್ಷರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಎಚ್‌ಪಿ ಜಿಲ್ಲಾ ಉಪಾಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ, ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಭಾಗವಹಿಸಬೇಕಾಗಿ ಬಜರಂಗದಳ ಜಿಲ್ಲಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.