Home_Page_Advt
Home_Page_Advt
Home_Page_Advt
Breaking News

ಗಾಳಿ ಮಳೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ರೂ. 75 ಕೋಟಿ ನಷ್ಟ – ಶಾಸಕರಿಂದ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆ

               ನಷ್ಟದ ವಿವರ….

  • 31 ಮನೆಗಳಿಗೆ ಭಾಗಶಃ ಹಾನಿ, 3 ಸಂಪೂರ್ಣ ಹಾನಿ
  • ಪಿಡಬ್ಲ್ಯೂಡಿ ರಸ್ತೆ ರೂ. 20 ಕೋಟಿ
  • ಜಿ.ಪಂ ರಸ್ತೆ ರೂ. 15 ಕೋಟಿ
  • ಎನ್.ಎಚ್.ಎ ರಸ್ತೆ ರೂ. 7 ಕೋಟಿ
  • ಮೆಸ್ಕಾಂ ಇಲಾಖೆ ರೂ. 10 ಕೋಟಿ
  • ನಗರಸಭೆ ಪುತ್ತೂರು, ವಿಟ್ಲ ಪಟ್ಟಣ ಪಂಚಾಯತ್ ರೂ. 19 ಕೋಟಿ
  • ತೋಟದ ಬೆಳೆ 777 ಹೆಕ್ಟೇರ್ ನಷ್ಟ. ರೂ. 3.5 ಕೋಟಿ
  • ಭತ್ತದ ಬೆಳೆಯಲ್ಲಿ 50 ಹೆಕ್ಟೇರ್ ನಷ್ಟ ಸಂಭವಿಸಿದ್ದು ಒಟ್ಟು
    ರೂ. 60 ಕೋಟಿ ನಷ್ಟ ಸಂಭವಿಸಿದೆ

ಪುತ್ತೂರು: ಕಳೆದ ಒಂದು ವಾರದಿಂದ ನಿರಂತರ ಎಡೆ ಬಿಡದೆ ಸುರಿದ ಮಳೆ ಮತ್ತು ಗಾಳಿಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆ.10ರ ತನಕ ಸುಮಾರು ರೂ. 75 ಕೋಟಿ ನಷ್ಟ ಸಂಭವಿಸಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿದ್ದಾರೆ.

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪುತ್ತೂರು ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಬೆಳೆ, ಮನೆಗಳು, ರಸ್ತೆ, ಸೇತುವೆ, ಕಟ್ಟಡಗಳು, ಸಾರ್ವಜನಿಕ ಆಸ್ತಿ, ಪಾಸ್ತಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಅತಿವೃಷ್ಟಿಯಿಂದ ಎರಡು ಜೀವ ಹಾನಿ ಸಂಭವಿಸಿದೆ. ಮೂರು ಜಾನುವಾರು ಜೀವ ಹಾನಿಯಾಗಿದೆ. ಇಬ್ಬರಿಗೆ ಗಾಯವಾಗಿದೆ. 31 ಮನೆಗಳು ಭಾಗಶಃ ಹಾನಿಯಾಗಿದ್ದು, ಮೂರು ಮನೆಗಳು ಸಂಪೂರ್ಣ ಹಾನಿಗೊಂಡಿದೆ. ಈ ಎಲ್ಲಾ ನಷ್ಟಗಳನ್ನು ಪರಿಶೀಲಿಸಿ ದಾಖಲಿಸಲಾಗಿದ್ದು, ಆ. 10ರ ತನಕ ಆಗಿರುವ ಹಾನಿ ಕುರಿತು ವರದಿ ಸಲ್ಲಿಸಲಾಗಿದೆ. ಆ.10ರ ನಂತರದ ಹಾನಿಗಳ ಪಟ್ಟಿಯನ್ನು 2ನೇ ಹಂತದಲ್ಲಿ ಮುಖ್ಯಮಂತ್ರಿಗಳಿಗೆ ವರದಿ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದ್ದಾರೆ. ಜೊತೆಗೆ ನಿರಾಶ್ರಿತರಿಗೆ ಪೂರಕವಾದ ಊಟೋಪಚಾರ, ವಸತಿ, ಆಹಾರದ ಕಿಟ್, ತಾತ್ಕಾಲಿಕ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ನಷ್ಟಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳಲಾಗುತ್ತಿದ್ದು, ಶೀಘ್ರವೇ ಪರಿಹಾರ ವಿತರಣೆ ಆಗಲಿದೆ ಎಂದು ಶಾಸಕರು ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.