Home_Page_Advt
Home_Page_Advt
Breaking News

ವರುಣಾರ್ಭಟಕ್ಕೆ ನಲುಗಿದ 2,217 ಗ್ರಾಮಗಳು

ಬೆಂಗಳೂರು:   ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ಈವರೆಗೆ 17 ಜಿಲ್ಲೆಗಳ 86 ತಾಲೂಕುಗಳಲ್ಲಿನ 2,217 ಗ್ರಾಮಗಳು ಪ್ರವಾಹಕ್ಕೆ ನಲುಗಿದೆ ಎಂದು ಸರಕಾರ ಘೋಷಣೆಯನ್ನು ಮಾಡಿದೆ. ವರುಣಾನ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 48ಕ್ಕೆ ಏರಿಕೆಯಾಗಿದ್ದು, 16 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಾರೆ 41,915 ಮನೆಗಳು ಹಾನಿಯಗೊಳಗಾಗಿವೆ. ಅದೇ ರೀತಿ 837 ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದು, 6,77,382 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ.

ಬೆಳಗಾವಿ, ಚಿಕ್ಕಮಗಳೂರು, ಬಾಗಲಕೋಟೆ, ಕೊಡಗು ಹಾಗೂ ದಕ್ಷಿಣ ಜಿಲ್ಲೆಗಳಲ್ಲಿ ಒಟ್ಟಾರೆ 1,224 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 3,94,486 ಮಂದಿ ಆಶ್ರಯ ಪಡೆದಿದ್ದಾರೆ. ಜೊತೆಗೆ ಚಿಕ್ಕಮಗಳೂರು, ಕೊಡಗು, ವಿರಾಜಪೇಟೆ, ದಕ್ಷಿಣ ಕನ್ನಡದ ಹಾಸನ, ಸಕಲೇಶಪುರ, ಉತ್ತರ ಕನ್ನಡದ ಅನೇಕ ಭಾಗಗಳಲ್ಲಿ ಸೇತುವೆ, ಗುಡ್ಡ ಕುಸಿತ ಸಂಭವಿಸಿದ್ದು,  136 ಪ್ರಮುಖ ರಸ್ತೆಗಳು ಹಾನಿಗೊಳಗಾಗಿವೆ ಎಂದು ಸರಕಾರ ವರದಿ ನೀಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.