Home_Page_Advt
Home_Page_Advt
Home_Page_Advt
Breaking News

ಪುತ್ತೂರು ಜಿಎಸ್‌ಬಿ ಮಹಿಳಾ ಮಂಡಳಿಯಿಂದ ಮೋದಿ ಆಲ್ಬಂ ಹಾಡು ಬಿಡುಗಡೆ

  • ಜಿ.ಎಸ್.ಬಿ ಸಮುದಾಯ ದೇಶ ಭಕ್ತರು – ಸಂಜೀವ ಮಠಂದೂರು


ಪುತ್ತೂರು: ದೇಶದಲ್ಲಿ ಒಡೆದು ಆಳುವ ನೀತಿಯ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರಂಭಗೊಂಡು ದೇಶದ ಅಭ್ಯುದಯಕ್ಕಾಗಿ ಚಿಂತಿಸುವ ಸಂದರ್ಭದಲ್ಲಿ ಜಿ.ಎಸ್.ಬಿ ಸಮುದಾಯದ ಅದಕ್ಕೆ ಕೈ ಜೋಡಿಸುವ ಮೂಲಕ ಜೆ.ಎಸ್.ಬಿ. ಸಮುದಾಯ ದೇಶ ಭಕ್ತರಾಗಿ ಮುನ್ನಡೆದರು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಇಲ್ಲಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಆ.14ರಂದು ನಡೆದ ಪುತ್ತೂರು ಜಿಎಸ್‌ಬಿ ಮಹಿಳಾ ಮಂಡಳಿ ವತಿಯ ದೇಶದ ಪ್ರದಾನಿ ನರೇಂದ್ರ ಮೋದಿಯವರ ‘ಮೋದಿ ಆಲ್ಬಂ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡಿದರು. ಜಗತ್ತು ಮೆಚ್ಚುವ ನಾಯಕ ನರೆಂದ್ರ ಮೋದಿಯವರ ಕಾರ್ಯಚಟುವಟಿಕೆಗೆ ತಕ್ಕಂತೆ ಅವರ ಕುರಿತು ರಚಿಸಿದ ಹಾಡಿನ ಕ್ಯಾಸೆಟ್ ಸಾಮಾನ್ಯ ಜನರ ಮನದಲ್ಲೂ ಮುಟ್ಟುವಂತಲಾಗಲಿ. ಮೋದಿಯ ಬಗ್ಗೆ ತಿಳಿದುಕೊಳ್ಳಲಿ. ಇದರಿಂದ ದೇಶ ಪ್ರೇಮ ಮೂಡಲಿ ಎಂದು ಹೇಳಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಸುರೇಂದ್ರ ಕಿಣಿ, ಅಶೋಕ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಎಸ್.ಬಿ ಮಹಿಳಾ ಮಂಡಲದ ಕಾರ್ಯದರ್ಶಿ ಸುಲತ ವರದರಾಜ ನಾಯಕ್, ವತ್ಸಲಾ ನಾಯಕ್, ವಿಜಯರಮಾನಂದ ನಾಯಕ್, ಶೋಭಾ ಪ್ರಭು, ರಜನಿ ಪ್ರಭು, ಚೈತ್ರ ಪೈ ಅತಿಥಿಗಳನ್ನು ಗೌರವಿಸಿದರು. ದಿವ್ಯ ಶೆಣೈ ಪ್ರಾರ್ಥಿಸಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಡುವೆ ಮೋದಿ ಆಲ್ಬಂ ಹಾಡನ್ನು ಪ್ರದರ್ಶನ ಮಾಡಲಾಯಿತು. ನಗರಸಭಾ ಸದಸ್ಯರಾದ ಭಾಮಿ ಅಶೋಕ್ ಶೆಣೈ, ಗೌರಿ ಬನ್ನೂರು, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಡಿ, ಉದ್ಯಮಿ ವಾಮನ್ ಪೈ, ಬಿಜೆಪಿ ಮಹಿಳಾ ಮೋರ್ಛಾದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಅಕ್ಷಯ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಮೋದಿಯ ಮೇಲಿನ ಗೌರವ:
ಜಿ.ಎಸ್.ಬಿ.ಮಹಿಳಾ ಮಂಡಳಿಯ ಅಧ್ಯಕ್ಷೆ ಸುಮನಾ ಪ್ರಭು, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಗೌರವ ಮತ್ತು ಸಮಾಜದ ಒಗ್ಗೂಡುವಿಕೆಯ ದೃಷ್ಟಿಯಿಂದ ಧ್ವನಿಸುರುಳಿ ಆಲ್ಬಮ್ ತಯಾರಿಸಲಾಗಿದೆ. ಇಚ್ಛಾಶಕ್ತಿ, ಕ್ರೀಯಾಶಕ್ತಿ ಮತ್ತು ದೈವ ಶಕ್ತಿಯಿಂದ ಕಾರ್ಯಪ್ರವೃತವಾಗಿದೆ ಎಂದು ಹೇಳಿದ ಅವರು ನಮ್ಮ ಸಮಾಜದ ಸುಮಾರು ಚಿಂತನ, ಅಮೃತಭಾರತಿ, ಭಜನಾ ತಂಡ ಸೇರಿದಂತೆ ಸುಮಾರು 35 ಮಂದಿ ಆಲ್ಬಮ್ ಹಾಡಿನಲ್ಲಿ ಸೇರಿಕೊಂಡಿದ್ದಾರೆ ಎಂದು ಹೇಳಿದ ಅವರು ಅತಿಥಿಗಳನ್ನು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.