ಪುತ್ತೂರು: ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಧರ್ಮ ಸಮ್ಮೇಳನದ ಮಂಟಪದಲ್ಲಿ ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ “ಕರ್ಣಾವಸಾನ” ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಭವ್ಯ ಶ್ರೀ ಕುಲ್ಕುಂದ, ಜಯಪ್ರಕಾಶ್ ನಾಕೂರು, ಮುರಳಿಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಕರ್ಣ(ಕಿಶೋರಿ ದುಗ್ಗಪ್ಪ ನಡುಗಲ್ಲು), ಅರ್ಜುನ (ಶುಭಾ ಗಣೇಶ್), ಶಲ್ಯ (ಹರಿಣಾಕ್ಷೀ ಜೆ ಶೆಟ್ಟಿ), ಕೃಷ್ಣ (ರೇಖಾ ರಾಜೇಂದ್ರ ಕುಪ್ಪೆಟ್ಟಿ), ಅಶ್ವಸೇನ(ಶಾರದಾ ಅರಸ್) ಸಹಕರಿಸಿದರು. ದೇವಳದ ಶಿವಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ದರು ಮೇನೇಜರ್ ಬಾಲ ಸುಬ್ರಹ್ಮಣ್ಯ ಭಟ್ ಪ್ರಸಾದ ನೀಡಿ ಗೌರವಿಸಿದರು. ಸಂಘದ ಸಂಚಾಲಕ ಭಾಸ್ಕರ್ ಬಾರ್ಯ ವಂದಿಸಿದರು.